ಸಿಂಧನೂರು-ಮಸ್ಕಿ ಹೆದ್ದಾರಿ ತಾತ್ಕಾಲಿಕ ಸೇತುವೆ ಕುಸಿವ ಭೀತಿ, ಸವಾರರಲ್ಲಿ ಆತಂಕ

Spread the love

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್‌ 03

ನಗರದ ಹೊರವಲಯದ ಸಿಂಧನೂರು-ಮಸ್ಕಿ ಹೆದ್ದಾರಿ (ಎನ್ನೆಚ್‌ 150ಎ)ಯ ಅರಿಹಂತ್‌ ರೈಸ್‌ ಮಿಲ್‌ ಬಳಿ ನಿರ್ಮಾಣ ಹಂತದಲ್ಲಿರುವ ತಾತ್ಕಾಲಿಕ ಸೇತುವೆ ಮೇಲೆ ಮಳೆ ನೀರು ನಿಂತಿದ್ದರಿಂದ ಕುಸಿಯುವ ಭೀತಿ ಉಂಟಾಗಿದ್ದು, ಸವಾರರು ಆತಂಕದಿಂದ ವಾಹನ ಚಲಾಯಿಸುತ್ತಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಬುಧವಾರ ಬೆಳಿಗ್ಗೆ ತಾತ್ಕಾಲಿಕ ಸೇತುವೆ ಮೇಲೆ ನೀರು ನಿಂತು ಪ್ರಯಾಣಿಕರು ವಾಹನ ಚಲಾಯಿಸಲು ಪರಿತಪರಿಸುತ್ತಿರುವುದು ಕಂಡುಬಂತು.
ʼಗುತ್ತಿಗೆದಾರರು ನಾಪತ್ತೆ ?ʼ
“ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ತಾತ್ಕಾಲಿಕ ಸೇತುವೆ ಮೇಲೆ ನೀರು ನಿಂತು ಕಂದಕ ಉಂಟಾಗಿದೆ. ಲಾರಿ ಇಲ್ಲವೇ ಬಸ್ಸುಗಳು ಓಡಾಟದಿಂದ ಗಂಟೆಯಿಂದ ಗಂಟೆಗೆ ರಸ್ತೆ ಮಣ್ಣು ಕೊಚ್ಚಿ ಹೋಗಿ ಇನ್ನಷ್ಟು ಕಂದಕ ಉಂಟಾಗುತ್ತಿದೆ. ಇನ್ನಷ್ಟು ಜೋರು ಮಳೆ ಬಂದರೆ ತಾತ್ಕಾಲಿಕ ಸೇತುವೆ ಕುಸಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಸವಾರರು ಜೀವ ಅಂಗೈಯಲ್ಲಿಡಿದು ಪ್ರಯಾಣ ಮಾಡುತ್ತಿದ್ದರೆ, ಕಾಮಾಗಾರಿ ಹೊಣೆ ಹೊತ್ತ ಗುತ್ತಿಗೆದಾರರಾಗಿ, ಮೇಲ್ವಿಚಾರಣೆ ನಡೆಸಬೇಕಾದ ಎನ್‌ಎಚ್‌ಎಐ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಸ್ಥಳದಲ್ಲಿ ಇಲ್ಲ. ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ” ಎಂದು ಸವಾರರು ಆಕ


Spread the love

Leave a Reply

Your email address will not be published. Required fields are marked *