ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 22, 2026
ತಾಲ್ಲೂಕಿನ ತುರ್ವಿಹಾಳ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿ ವಕೀಲರೊಬ್ಬರ ಮೇಲೆ ಸೋಮವಾರ ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಈ ಘಟನೆಯನ್ನು ಖಂಡಿಸಿ ಸಿಂಧನೂರು ತಾಲ್ಲೂಕು ನ್ಯಾಯವಾದಿಗಳ ಸಂಘದಿAದ ನ್ಯಾಯಾಲಯದ ಕಲಾಪವನ್ನು ಸೋಮವಾರ ಬಹಿಷ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಘಟನೆ ?
ಪ್ರಕರಣವೊಂದರ ಕುರಿತಂತೆ ತುರ್ವಿಹಾಳ ಪಟ್ಟಣದ ವಕೀಲ ಅರಳಯ್ಯ ಎನ್ನುವವರ ಸಹೋದರರಿಂದ ಪೊಲೀಸರು ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಹೆದರಿಕೆ-ಬೆದರಿಕೆ ಹಾಕಿ ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡು ಬರುವುದು ಸರಿಯಲ್ಲ, ಈ ರೀತಿ ಮಾಡುವುದು ಯಾವ ಕಾನೂನಿನಲ್ಲಿದೇ ? ಎಂದು ಅರಳಯ್ಯ ಅವರು ಪೊಲೀಸರಿಗೆ ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ. ತದನಂತರ ಠಾಣೆಯ ಪೊಲೀಸರು ವಕೀಲ ಅರಳಯ್ಯ ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ವಕೀಲರ , ಪೊಲೀಸರ ನಡುವೆ ವಾಗ್ವಾದದ ವಿಡಿಯೋ ವೈರಲ್
ವಕೀಲರು ಹಾಗೂ ತುರ್ವಿಹಾಳ ಪೊಲೀಸ್ ಠಾಣೆಯ ಕೆಲ ಸಿಬ್ಬಂದಿಯವರು ಪರಸ್ಪರ ಮಾತಿನಚಕಮಕಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಇತ್ತೀಚಿಗೆ ಠಾಣೆಯಲ್ಲಿ ವಕೀಲರಿಗೆ ಗೌರವ ದೊರೆಯುತ್ತಿಲ್ಲ. ಇಂತಹ ಘಟನೆಗಳು ಪದೇ ಪದೆ ಮರುಕಳಿಸುತ್ತಿವೆ ಎಂದು ವಕೀಲರೊಬ್ಬರು ಬೇಸರ ವ್ಯಕ್ತಪಡಿಸಿ
