ಸಿಂಧನೂರು : ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾನ್, ಬಾಟಲ್‌ಗಳಿಗೆ ಪೆಟ್ರೋಲ್, ಡಿಸೇಲ್ ಹಾಕುವುದು ನಿಷೇಧ, ಚಾಲಕರು, ರೈತರ ಪರದಾಟ !!

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 20

ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಇಂಧನವನ್ನು ಕ್ಯಾನ್, ಬಾಟಲ್‌ಗಳಲ್ಲಿ ಹಾಕುವುದನ್ನು ನಿಷೇಧಿಸಲಾಗಿದ್ದು, ಇಂಧನ ಕೊರತೆ ಉಂಟಾಗಿ ಹಾದಿ ಮಧ್ಯೆ ನಿಂತ ವಾಹನ ಚಾಲಕರು ಪರದಾಡುತ್ತಿರುವುದು ದಿನಾಂಕ: 20-03-2026 ಗುರುವಾರದಂದು ಬೆಳಿಗ್ಗೆ ಕಂಡುಬAತು.
ದಾರಿ ನಡುವೆ ಮೋಟರ್ ಸೈಕಲ್‌ನಲ್ಲಿ ಇಂಧನ ಖಾಲಿಯಾಯಿತು. ಬಾಟಲ್‌ನಲ್ಲಿ ಲೀಟರ್ ಪೆಟ್ರೋಲ್ ಹಾಕಿ ಎಂದು ಬಸಾಪುರ ಬಳಿ ಇರುವ ಪೆಟ್ರೋಲ್ ಬಂಕ್‌ನ ಸಿಬ್ಬಂದಿಗೆ ಗ್ರಾಹಕರೊಬ್ಬರು ಕೇಳಿದಾಗ, ಬಾಟಲ್, ಕ್ಯಾನ್‌ಗಳಲ್ಲಿ ಇಂಧನ ಹಾಕದಂತೆ ನಮಗೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆಯಿದ್ದು, ಹಾಕಲಾಗುವುದಿಲ್ಲ. ಗಾಡಿಯೇ ಇಲ್ಲಿಗೆ ತನ್ನಿ ಇಲ್ಲವೇ ನಾವೇನು ಮಾಡಲಾಗುವುದಿಲ್ಲ” ಎಂದು ಹೇಳುತ್ತಿದ್ದಂತೆ ಸೈಕಲ್ ಮೋಟರ್ ಚಾಲಕರು ತಬ್ಬಿಬ್ಬಾದರು.
ಲೀಟರ್ ಅಲ್ಲ, ಅರ್ಧ ಲೀರ‍್ರೂ ಹಾಕುವುದಿಲ್ಲ !
“ಬಾಟಲ್, ಕ್ಯಾನ್‌ಗೆ ಇಂಧನ ಯಾಕೆ ಹಾಕುವುದಿಲ್ಲ, ನಡು ದಾರಿಯಲ್ಲಿ ಗಾಡಿಗೆ ಪೆಟ್ರೋಲ್ ಇಲ್ಲವೇ ಡಿಸೆಲ್ ಆದವರ ಗತಿಯೇನು ? ಎಂದು ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಒಬ್ಬರನ್ನು ವಿಚಾರಿಸಿದರೆ, ಸರ್ ನೋಡಿ ಲೀಟರ್ ಇಲ್ಲ, ಅರ್ಧ ಲೀಟರ್ ಹಾಕುವುದಿಲ್ಲ. ನಮಗೆ ಮೇಲಿನಿಂದ ಸೂಚನೆಯಿಂದ ಗಾಡಿಯನ್ನು ಇಲ್ಲಿಗೆ ತಂದು ಬೇಕಾದ್ರೆ ಫುಲ್ ಟ್ಯಾಂಕ್ ಮಾಡಿಸಿಕೊಂಡು ಹೋಗಿ, ನಮಗೆ ಅಭ್ಯಂತರವಿಲ್ಲ. ಆದ್ರೆ ಬಾಟಲ್ ಅಥವಾ ಕ್ಯಾನ್‌ನಲ್ಲಿ ಮಾತ್ರ ಹಾಕುವುದಿಲ್ಲ” ಪ್ರತಿಕ್ರಿಯಿಸಿದರು.
ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಕೊರತೆ ಬಿಸಿ ತಟ್ಟಿದೆಯೇ ?
ಈಗಾಗಲೇ ಸರ್ಕಾರ ವಾಣಿಜ್ಯ ಉಪಯೋಗಕ್ಕೆ ಸಿಲಿಂಡರ್ ಗ್ಯಾಸ್ ಸ್ಥಗಿತಗೊಳಿಸಲಾಗಿದ್ದು, ಕೇವಲ ಗೃಹ ಬಳಕೆಯ ಅನಿಲ ಇಂಧನ ಮಾತ್ರ ಬುಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಗೃಹ ಬಳಕೆ ಇಂದನ ಸಮಪರ್ಕವಾಗಿ, ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ನಡುವೆ ಪೆಟ್ರೋಲ್ ಮತ್ತು ಡಿಸೆಲ್ ಬಂಕ್‌ಗಳಲ್ಲಿ ಬಾಟಲ್, ಕ್ಯಾನ್‌ಗಳಲ್ಲಿ ಇಂಧನ ಹಾಕುವುದನ್ನು ನಿಷೇಧಿಸಿರುವುದನ್ನು ಗಮನಿಸಿದರೆ ಪೆಟ್ರೋಲ್ ಬಂಕ್‌ಗಳಿಗೂ ಇಂಧನ ಅಭಾವದ ಬಿಸಿ ತಟ್ಟಿದೆ ಎಂಬ ಮಾತುಗಳು ನಾಗರಿಕ ವಲಯದಲ್ಲಿ ಕೇಳಿಬರುತ್ತಿವೆ.
ಕೃಷಿ ಕೆಲಸಗಳಿಗೆ ರೈತರು ಇಂಧನಕ್ಕಾಗಿ ಏನು ಮಾಡಬೇಕು ?
ತಾಲೂಕು ವ್ಯಾಪ್ತಿಯಲ್ಲಿ ಬೇಸಿಗೆಯಾಗಿದ್ದರಿಂದ ಕೃಷಿ ಕೆಲಸಗಳು ಜೋರು ನಡೆದಿವೆ. ಒಂದೊಂದು ಬಾರಿ ಹಗಲೂ-ರಾತ್ರಿ ಟ್ರ್ಯಾಕ್ಟರ್‌ ಸೇರಿದಂತೆ ಇನ್ನಿತರೆ ಯಂತ್ರಗಳನ್ನು ಬಳಸಬೇಕಿರುವುದರಿಂದ ಇಂಧನ ಖಾಲಿಯಾದರೆ ಏನು ಮಾಡಬೇಕೆನ್ನುವುದು ತಿಳಿಯುತ್ತಿಲ್ಲ. ಗ್ರಾಮೀಣ ಪ್ರದೇಶದಿಂದ ಮುಖ್ಯ ರಸ್ತೆಯವರೆಗೆ ಟ್ರ್ಯಾಕ್ಟರ್‌ನ್ನು ಚಲಾಯಿಸಿಕೊಂಡು ಬರುವುದಕ್ಕೆ ಲೀಟರ್‌ಗಟ್ಟಲೇ ಡೀಸೆಲ್ ಬೇಕು. ಹೀಗಾದರೆ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತದೆ ಎಂದು ರೈತರೊಬ್ಬರು ಅಳಲುತೋಡಿಕೊಂಡಿದ್ದಾರೆ.
ಪಂಪ್‌ಸೆಟ್ ನಿರ್ವಹಣೆಯ ಗತಿಯೇನು ?
ಟ್ರ್ಯಾಕ್ಟರ್‌ ಹಾಗೂ ಮೋಟರ್ ಸೈಕಲ್‌ಗಳಿಗೆ ಏನಾದರೂ ಮಾಡಿ ಬಂಕ್‌ಗಳಿಗೆ ತಂದು ಇಂಧನ ತುಂಬಿಸಿಕೊಂಡು ಹೋಗಬಹುದು, ಹೊಲಗಳಲ್ಲಿನ ಬೆಳೆಗಳಿಗೆ ನೀರು ಹರಿಸಲು ವಿದ್ಯುತ್ ಸೌಕರ್ಯ ಇಲ್ಲದ ಪ್ರದೇಶದಲ್ಲಿ ಪಂಪ್‌ಸೆಟ್ ಬಳಕೆ ಮಾಡಲಾಗುತ್ತಿದ್ದು, ಅಂತಹ ರೈತರಿಗೆ ಸಮಸ್ಯೆಯಾಗಲಿದೆ. ಕ್ಯಾನ್‌ಗೆ ಪೆಟ್ರೋಲ್, ಡೀಸೆಲ್ ಹಾಕುವುದಿಲ್ಲ ಎಂದರೆ ಪಂಪ್‌ಸೆಟ್‌ಗಳನ್ನು ಬಂಕ್‌ಗಳಿಗೆ ತರಲು ಆದೀತೆ ? ಎಂದು ಪಂಪ್‌ಸೆಟ್ ಅವಲಂಬಿತ ರೈತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *