ಸ್ಪೆಷಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 12
ಸಿಲಿಂಡರ್ ಗ್ಯಾಸ್ ಕಂಪನಿಗಳ ನಗರದ ಏಜೆನ್ಸಿಯವರ ಕಾರ್ಯಾಲಯಗಳಿಗೆ ಗುರುವಾರ ಬೆಳಿಗ್ಗೆಯಿಂದಲೇ ಜನರು ಮುಗಿಬಿದ್ದಿದ್ದು ಕಂಡುಬAತು. ಬೆಲೆ ಏರಿಕೆಯ ಬಿಸಿಯ ನಡುವೆ ಸಿಲಿಂಡರ್ ಗ್ಯಾಸ್ ಅಭಾವ ಜನಸಾಮಾನ್ಯರಿಗೆ ಆಘಾತ ಉಂಟು ಮಾಡಿದೆ.
ಶಹರ ಪೊಲೀಸ್ ಸ್ಟೇಶನ್ ಪಕ್ಕದ ವಳಬಳ್ಳಾರಿ ಚನ್ನಬಸವೇಶ್ವರ ಎಚ್‌ಪಿ ಗ್ಯಾಸ್ ಏಜೆನ್ಸಿ, ಬಪ್ಪೂರ ರಸ್ತೆಯ ಶ್ರೀ ಗಂಗಾ ಇಂಡೇನ್ ಗ್ಯಾಸ್ ಏಜೆನ್ಸಿ ಹಾಗೂ ಕುಷ್ಟಗಿ ರಸ್ತೆಯ ಶ್ರೀ ಸಿದ್ಧಲಿಂಗೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿ ಕಾರ್ಯಾಲಯಕ್ಕೆ ಗ್ರಾಹಕರು ಭೇಟಿ ನೀಡಿ, ಸಿಲಿಂಡರ್ ಗ್ಯಾಸ್‌ಗೆ ಬೇಡಿಕೆಯಿಡುತ್ತಿದ್ದು ಸಾಮಾನ್ಯವಾಗಿತ್ತು.
ಗ್ಯಾಸ್ ಬುಕಿಂಗ್
“ವಾಣಿಜ್ಯ ಉದ್ದೇಶದ ಸಿಲಿಂಡರ್ ಗ್ಯಾಸ್ ವಿತರಣೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ಯಾಸ್‌ಬುಕ್ ರಿಜಿಸ್ಟೆçÃಶನ್ ನಂಬರ್ ಮತ್ತು ಮೊಬೈಲ್ ನಂಬರ್ ಅವಶ್ಯವಿದ್ದು, ಒಟಿಪಿ ಮೂಲಕ ಬುಕಿಂಗ್ ಮಾಡಿಕೊಡಲಾಗುವುದು. ಬುಕಿಂಗ್ ಮಾಡಿ ಎರಡು ದಿನಗಳ ನಂತರ ಗ್ರಾಹಕರಿಗೆ ಸಿಲಿಂಡರ್ ಗ್ಯಾಸ್ ದೊರೆಯಲಿದೆ” ಎಂದು ಏಜೆನ್ಸಿಯ ಉದ್ಯೋಗಿಯೊಬ್ಬರು ತಿಳಿಸಿದರು.
“ಮೂರು ದಿನದಿಂದ ಕಾಯುತ್ತಿದ್ದೇವೆ ಇನ್ನೂ ಸಿಲಿಂಡರ್ ಸಿಕ್ಕಿಲ್ಲ”
ಬುಕಿಂಗ್ ಮಾಡಿಸಿ ಮೂರು ದಿನವಾಗಿದೆ. ಏಜೆನ್ಸಿ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆದರೆ ಇಲ್ಲಿಯವರೆಗೂ ಸಿಲಿಂಡರ್ ಗ್ಯಾಸ್ ದೊರೆತಿಲ್ಲ. ಇದರಿಂದ ಆಹಾರ ತಯಾರಿಕೆಗೆ ಸಮಸ್ಯೆಯಾಗಿದೆ. ಕೌಂಪೌAಡ್‌ನಲ್ಲಿ ಸೌದೆ ಒಲೆ ಹಚ್ಚಿ ಅನ್ನ ಮಾಡುವ ದುಸ್ಥಿತಿ ಎದುರಾಗಿದೆ” ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಗ್ಯಾಸ್ ಏಜೆನ್ಸಿಗಳು
ಆಹಾರ ಇಲಾಖೆಯ ಮಾಹಿತಿಯಂತೆ ಶ್ರೀ ಶುಭ ವೆಂಕಟೇಶ್ವರ ಇಂಡೇನ್ ಗ್ರಾಮೀಣ ವಿತರಕ ತುರ್ವಿಹಾಳ, ವಳಬಳ್ಳಾರಿ ಚನ್ನಬಸವೇಶ್ವರ ಎಚ್‌ಪಿ ಗ್ಯಾಸ್ ಏಜೆನ್ಸಿ ಸಿಂಧನೂರು, ಶ್ರೀ ಗಂಗಾ ಇಂಡೇನ್ ಗ್ಯಾಸ್ ಏಜೆನ್ಸಿ, ಶ್ರೀ ಸಿದ್ಧಲಿಂಗೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿ ಸಿಂಧನೂರು, ವೀರಭದ್ರೇಶ್ವರ ಹೆಚ್‌ಪಿ ಗ್ಯಾಸ್ ಏಜೆನ್ಸಿ ರೌಡಕುಂದಾ, ಶ್ರೀ ಅಕ್ಷಯ ಭಾರತ ಗ್ಯಾಸ್ ಏಜೆನ್ಸಿ ಗಾಂಧಿನಗರ, ಶ್ರೀ ಬಸವೇಶ್ವರ ಹೆಚ್‌ಪಿ ಗ್ಯಾಸ್ ಏಜೆನ್ಸಿ ಬಳಗಾನೂರು, ಶ್ರೀ ಅಂಬಾದೇವಿ ಗ್ರಾಮೀಣ ವಿತರಕ ಭಾರತ ಗ್ಯಾಸ್ ಸಾಲಗುಂದಾ ಒಟ್ಟು 8 ಅನಿಲ ವರ್ತಕರ ಏಜೆನ್ಸಿಗಳಿವೆ ಎಂದು ಹೇಳಲಾಗುತ್ತಿದ್ದು, ಬುಕಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಹಕರಿಗೆ ವಿತರಣೆ ಪ್ರಕ್ರಿಯೆ ಬಹಳಷ್ಟು ನಿಧಾನವಾಗಿದೆ. ಈ ಹಿಂದೆ ಹಣ ಪಾವತಿಸಿದ ತತ್‌ಕ್ಷಣ ಗ್ಯಾಸ್ ಪಡೆಯಬಹುದಾಗಿತ್ತು, ಈಗ ದಿನಗಟ್ಟಲೇ ಕಾಯುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಹಕರನ್ನು ಕಾಡಿದ ಸರ್ವರ್ ಬ್ಯುಸಿ !
ಗೃಹ ಬಳಕೆ ಅಡುಗೆ ಅನಿಲ ವಿತರಕ ಏಜೆನ್ಸಿಗಳ ಕಾರ್ಯಾಲಯಕ್ಕೆ ಗ್ರಾಹಕರು ಮುಗಿಬಿದ್ದ ಹಿನ್ನೆಲೆಯಲ್ಲಿ ಬುಕಿಂಗ್ ವ್ಯವಸ್ಥೆಯಲ್ಲಿ ಸರ್ವರ್ ಸಮಸ್ಯೆ ಎದುರಾಯಿತು. ಏಜೆನ್ಸಿಗಳ ಉದ್ಯೋಗಿಗಳು ಗ್ರಾಹಕರ ಸಿಲಿಂಡರ್ ಗ್ಯಾಸ್ ನಂಬರ್ ರಿಜಿಸ್ಟರ್ ಮಾಡಿ, ಮೊಬೈಲ್ ಒಟಿಪಿ ಪಡೆಯಬೇಕೆನ್ನುವಷ್ಟರಲ್ಲಿ ಸರ್ವರ್‌ನಲ್ಲಿ ಕೈಕೊಟ್ಟಿತ್ತು. ಇದರಿಂದ ಅಡಚಣೆ ಉಂಟಾಗಿ ಕೆಲವರು ತಾಸುಗಟ್ಟಲೇ ಕಾದು ಕುಳಿತರು.

ಬಿಸಿಲು ಮತ್ತು ಸಿಲಿಂಡರ್ ಬಿಸಿ !
ನೆತ್ತಿ ಸುಡುವ ಬಿಸಿಲಿನಲ್ಲಿ ಬಹುತೇಕ ಮಹಿಳಾ ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಗುಂಪು ಗುಂಪಾಗಿ ಬರುತ್ತಿರುವುದು ಗುರುವಾರ ಕಂಡುಬAತು. ಕಂಪನಿಗಳ ಅಂಗಡಿಗಳ ಮುಂದೆ ಸೈಕಲ್ ಮೋಟರ್‌ಗಳು ಸಾಲುಗಟ್ಟಿ ನಿಂತಿದ್ದವು. ಬಪ್ಪೂರು ರಸ್ತೆಯ ಶ್ರೀ ಗಂಗಾ ಏಜೆನ್ಸಿಯು ಗ್ರಾಮೀಣ ಪ್ರದೇಶದ ಜನರಿಗೆ ಸಿಲಿಂಡರ್ ಗ್ಯಾಸ್ ವಿತರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಗ್ರಾಹಕರು ಈ ಏಜೆನ್ಸಿಗೆ ಭೇಟಿ ನೀಡಿದರು. ಗ್ರಾಹಕರಿಗೆ ಸಮಜಾಯಿಷಿ ನೀಡುವವರಷ್ಟರಲ್ಲಿ ಉದ್ಯೋಗಿಗಳು ಹೈರಾಣಾಗಿದ್ದಾರೆ.
ಇನ್ನೆರಡು ದಿನಗಳಲ್ಲಿ ಸಮಸ್ಯೆ ಹೆಚ್ಚುವ ಸಾಧ್ಯತೆ !?
“ನಮ್ಮ ಶಾಲೆಯಲ್ಲಿ 200 ವಿದ್ಯಾರ್ಥಿಗಳಿದ್ದಾರೆ, ವಾರಕ್ಕೆ 3 ಗ್ಯಾಸ್ ಬೇಕು. ಈಗ ಗ್ಯಾಸ್ ಖಾಲಿ ಆಗಿದೆ. ಪ್ರೆöÊಮರಿ ಶಾಲೆಯ ಗ್ಯಾಸ್ ಪಡೆದುಕೊಂಡು ಬಿಸಿಯೂಟ ತಯಾರಿಸುತ್ತಿದ್ದೇವೆ. ಒಂದು ವೇಳೆ ಅದು ಖಾಲಿಯಾಗುವುದರೊಳಗೆ ಗ್ಯಾಸ್ ಸಿಕ್ಕರೆ ಅನುಕೂಲ ಇಲ್ಲದೇ ಹೋದರೆ, ಕಟ್ಟಿಗೆ ಒಲೆಗೆ ಮೊರೆ ಹೋಗಬೇಕಾಗುತ್ತದೆ. ಅದು ಕೂಡ ಹೊರೆಯ ಜೊತೆಗೆ ಆರ್ಥಿಕವಾಗಿ ದುಬಾರಿಯಾಗಲಿದೆ” ಎಂದು ಶಾಲಾ ಶಿಕ್ಷಕರೊಬ್ಬರು ಹೇಳುತ್ತಾರೆ.

ಡಲ್ಲು ಹೊಡೆಯುತ್ತಿರುವ ಹೋಟೆಲ್‌ಗಳು !!
ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ವಿತರಣೆಯನ್ನು ಸ್ಥಗಿತಗೊಳಿಸಿರುವುದರಿಂದ, ನಗರದ ಬಹಳಷ್ಟು ಹೋಟೆಲ್‌ಗಳ ಮಾಲೀಕರು ಡಲ್ಲು ಹೊಡೆಯುತ್ತಿದ್ದಾರೆ. ಇನ್ನೂ ಒಂದೆರಡು ದಿನಕ್ಕಾಗುವಷ್ಟು ಸಿಲಿಂಡರ್ ಇವೆ. ಆನಂತರ ಹೋಟೆಲ್ ಬಾಗಿಲಿಗೆ ಬೀಗ ಹಾಕಬೇಕಾಗುತ್ತದೆ. ಕಟ್ಟಿಗೆ ಒಲೆಯಲ್ಲಿ ಕೆಲವೊಂದು ಶುಚಿ-ರುಚಿಯಾಗಿಪದಾರ್ಥಗಳನ್ನು ತಯಾರಿಸಲು ಆಗುವುದಿಲ್ಲ, ಈ ನಡುವೆ ಕಟ್ಟಿಗೆಯನ್ನು ಮಾರುಕಟ್ಟೆಯಲ್ಲಿ ತಂದು ಆಹಾರ ತಯಾರಿಸುವುದು ಮತ್ತು ನಿರ್ವಹಣೆ ಮಾಡುವುದು ಕಷ್ಟವಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಹೇಳುತ್ತಾರೆ. ಹೋಟೆಲ್ ಸೇರಿದಂತೆ ಇನ್ನಿತರೆ ತಿಂಡಿ-ತಿನಿಸಿನ ಅಂಗಡಿಗಳು ಕದ ಹಾಕಿದರೆ, ನಾವು ಎಲ್ಲಿ ಊಟ ಮಾಡಬೇಕು ಎಂಬುದು ಹೋಟೆಲ್, ಖಾನಾವಳಿ ಅವಲಂಬಿತ ಜನಸಾಮಾನ್ಯರು ಹಾಗೂ ನೌಕರರ ಅಳಲಾಗಿದೆ.
ಹಾಸ್ಟೆಲ್‌ನಲ್ಲಿ ಅನ್ನ, ಸಾಂಬಾರ್ !!
ಸಿಲಿಂಡರ್ ಗ್ಯಾಸ್ ವಿತರಣೆ ಕೊರತೆಯಿಂದಾಗಿ ಕೆಲ ಹಾಸ್ಟೆಲ್‌ಗಳು, ಗ್ಯಾಸ್ ಉಳಿಸಲು ದಿನವೂ ಅನ್ನ, ಸಾಂಬಾರ್ ತಯಾರಿಸುತ್ತಿದ್ದಾರೆ. ಒಂದೇ ತೆರನಾದ ಊಟ ಮಾಡಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಇದು ಇನ್ನೆಷ್ಟು ದಿನ ಮುಂದುವರಿಯುತ್ತದೆಯೋ ಎಂದು ವಿದ್ಯಾರ್ಥಿ ಪಾಲಕರೊಬ್ಬರು ಮಾಹಿತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

“ಕೇಂದ್ರ ಸರ್ಕಾರ ಜನರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಗ್ಯಾಸ್ ವಿತರಿಸಬೇಕು“
ಕೇಂದ್ರ ಸರ್ಕಾರದ ಬೇಜವಾಬ್ದಾರಿ ಮತ್ತು ಜನ ವಿರೋಧಿ ನೀತಿಗಳಿಂದ ಜನಸಾಮಾನ್ಯರು ಸಿಲಿಂಡರ್ ಗ್ಯಾಸ್‌ಗೆ ಅಲೆದಾಡುವಂತಾಗಿದೆ. ಈಗಾಗಲೇ ಈ ಹಿಂದೆ ಕೊರೊನಾ ಲಾಕ್‌ಡೌನ್‌ನಿಂದ ಜನರು ತತ್ತರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಜನರಿಗೆ ಅಗತ್ಯವಿರುವಷ್ಟು ಸಿಲಿಂಡರ್ ಗ್ಯಾಸ್ ಸಮರ್ಪಕವಾಗಿ, ಸುಲಭವಾಗಿ ಮತ್ತು ಪಾರದರ್ಶಕವಾಗಿ ವಿತರಿಸಬೇಕು. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ಶ್ರಮಿಸಬೇಕು. ಇಲ್ಲದೇ ಹೋದಲ್ಲಿ ಜನರು ಹಸಿವಿನಿಂದ ಬಳಲಬೇಕಾದ ದುಸ್ಥಿತಿ ಎದುರಾಗಲಿದೆ. ಈ ನಡುವೆ ತಾಲೂಕು ಮತ್ತು ಜಿಲ್ಲಾಡಳಿತಗಳು ಕಾಳಸಂತೆಯಲ್ಲಿ ಸಿಲಿಂಡರ್ ಗ್ಯಾಸ್‌ಗಳು ಬಿಕರಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
-ನಾಗರಾಜ ಪೂಜಾರ್, ಎಐಸಿಸಿಟಿಯು, ರಾಜ್ಯ ಸಹಕಾರ್ಯದರ್ಶಿ, ಸಿಂಧನೂರು.

