ಸಿಂಧನೂರು: ಸಭೆ ಕರೆಯದ ಶಾಸಕರು, ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದ ಅಸಮಾಧಾನ !

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 17

ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಸೂಕ್ತ ಕ್ರಮಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದ್ದ ಶಾಸಕರು ಇಲ್ಲಿಯವರೆಗೂ ಸಭೆ ಕರೆಯದೇ ಇರುವುದಕ್ಕೆ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

Namma Sindhanuru Click For Breaking & Local News
ಸಿಂಧನೂರಿನಲ್ಲಿ ದಿನಾಂಕ:24-12-2025ರಂದು ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟದಿಂದ ಶಾಸಕರಿಗೆ ಮನವಿಪತ್ರ ಸಲ್ಲಿಸಿರುವುದು.

ಶಾಸಕರಿಗೆ ಮನವಿ
ನಗರ ಸೇರಿದಂತೆ ತಾಲೂಕಿನ ಹಲವು ಕಡೆ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟದಿಂದ ಯುವಜನರು ಹಾದಿ ತಪ್ಪುತ್ತಿದ್ದು, ಇದರಿಂದ ಹಲವರು ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ. ಹಾಗಾಗಿ ಪೊಲೀಸ್, ಅಬಕಾರಿ ಸೇರಿದಂತೆ ಸಂಬAಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಭೆ ಕರೆದು ಕ್ರಮಕ್ಕೆ ಮುಂದಾಗಬೇಕೆAದು ಒಕ್ಕೂಟದಿಂದ ದಿನಾಂಕ: 24-12-2025ರಂದು ಶಾಸಕರಿಗೆ ಮನವಿಪತ್ರ ಸಲ್ಲಿಸಲಾಗಿತ್ತು.
ಭರವಸೆ
ಒಕ್ಕೂಟದ ಮನವಿಪತ್ರ ಸ್ವೀಕರಿಸಿದ್ದ ಶಾಸಕರು, ಜಾತ್ರೆ ಸೇರಿದಂತೆ ಸಿಎಂ ಕಾರ್ಯಕ್ರಮ ಇರುವುದರಿಂದ ಜನವರಿ ಮೊದಲ ಇಲ್ಲವೇ, ಎರಡನೇ ವಾರದಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಭೆ ಕರೆಯದೇ ಇರುವ ಬಗ್ಗೆ ಹೆಸರೇಳಲಿಚ್ಚಿಸದ ಒಕ್ಕೂಟದ ಸಂಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಕ್ಕೊತ್ತಾಯಗಳೇನು ?
ಡ್ರಗ್ಸ್ ಸಾಗಣೆ ಹಾಗೂ ಮಾರಾಟದಲ್ಲಿ ಭಾಗಿಯಾದವರನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ-ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು, ಗಾಂಜಾ ಹಾಗೂ ಮಾದಕ ವಸ್ತುಗಳ ದುಷ್ಚಟಕ್ಕೆ ಮಕ್ಕಳು, ವಿದ್ಯಾರ್ಥಿ/ಯುವಜನರು ಒಳಗಾಗುವುದನ್ನು ತಡೆಯಲು ವಿವಿಧ ಇಲಾಖೆಗಳನ್ನು ಒಳಗೊಂಡ ಉಸ್ತುವಾರಿ ತಂಡ ರಚಿಸಿ ಪ್ರತಿ ತಿಂಗಳು ನಿಗದಿತ ದಿನಾಂಕದAದು ಸಭೆ ನಡೆಸಿ, ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು., ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ಕೆಲವರು ನಗರದ ಹಲವು ವಾರ್ಡ್ಗಳಲ್ಲಿ ಸಾರ್ವಜನಿಕರನ್ನು ಹೆದರಿಸುವುದು-ಬೆದರಿಸುವುದು ಮಾಡುತ್ತಿದ್ದು ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಸಿಂಧನೂರು ನಗರದ ಹಲವು ವಾರ್ಡ್ಗಳು, ಜವಳಗೇರಾ, ಆರ್.ಎಚ್.ಕ್ಯಾಂಪ್ ಸೇರಿದಂತೆ ಇನ್ನಿತರೆ ಕಡೆ ಗಾಂಜಾ ಮಾರಾಟ ಹಾಗೂ ಮಾದಕ ವಸ್ತು ಮಿಶ್ರಿತ ಚಾಕಲೇಟ್, ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ತಿಳಿದುಬಂದಿದ್ದು, ಜಿಲ್ಲಾ ಡ್ರಗ್ ನಿಯಂತ್ರಣಾಧಿಕಾರಿಗಳು ಈ ಕುರಿತು ತನಿಖೆ ನಡೆಸಬೇಕು, ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ನೀಡಿದ ಮಾಹಿತಿಯು ಗಾಂಜಾ ಮತ್ತು ಮಾದಕ ವಸ್ತು ಮಾರಾಟ ಮಾಡುವ ಜಾಲದವರಿಗೆ ಸೋರಿಕೆಯಾಗಿದ್ದು, ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ವಾರ್ಡ್ಗಳಲ್ಲಿ ಬೀಟ್‌ಗಳನ್ನು ಹೆಚ್ಚಿಸಬೇಕು, ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡ, ಪ್ರಭಾವಗಳಿಗೆ ಒಳಗಾಗದೇ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು” ಎಂಬ ಹಕ್ಕೊತ್ತಾಯಗಳ ಕುರಿತ ಮನವಿಪತ್ರವನ್ನು ಶಾಸಕರಿಗೆ ಸಲ್ಲಿಸಲಾಗಿತ್ತು.


Spread the love

Leave a Reply

Your email address will not be published. Required fields are marked *