ಸಿಂಧನೂರು: ಸಿಜೆಐಯವರ ಮೇಲಷ್ಟೇ ದಾಳಿಯಲ್ಲ; ಸಂವಿಧಾನ-ನ್ಯಾಯಾಂಗದ ಮೇಲೆ ದುರ್ದಾಳಿ: ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಖಂಡನೆ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 09

ಸುಪ್ರಿಂ ಕೋರ್ಟ್ ಕಲಾಪದ ವೇಳೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಮನುವಾದಿಯೊಬ್ಬ ಶೂ ಎಸೆದ ಪ್ರಕರಣವು ಕೇವಲ ನ್ಯಾಯಾಧೀಶರ ಮೇಲಷ್ಟೇ ನಡೆದ ದಾಳಿಯಲ್ಲ; ಇದು ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ನಡೆದ ದುರ್ದಾಳಿಯಾಗಿದೆ ಎಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಖಂಡಿಸಿದೆ.
ನಗರದ ಮಿಲಾಪ್ ಶಾದಿಮಹಲ್‌ನಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಸನಾತನವಾದಿಗಳು ನ್ಯಾಯಾಂಗದ ಮೇಲೆಯೂ ಪರಾಕ್ರಮ ಸಾಧಿಸಲು ಹೊರಟಿದ್ದಾರೆ. ನಮ್ಮ ಪರ ತೀರ್ಪು ನೀಡದೇ ಹೋದರೆ ನಾವು ಯಾರನ್ನೂ ಕೇಳುವದಿಲ್ಲ ಎನ್ನುವ ಮನಸ್ಥಿತಿಗೆ ತಲುಪಿದ್ದು, ಇದಕ್ಕೆ ಅಧಿಕಾರ ಚುಕ್ಕಾಣಿ ಹಿಡಿದ ಫ್ಯಾಸಿಸ್ಟ್ ಶಕ್ತಿಗಳು ಪರೋಕ್ಷ ಬೆಂಬಲ ನೀಡುತ್ತಿರುವುದೇ ಪ್ರಮಖ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ವರ್ಣಾಶ್ರಮ, ಮನುವಾದವನ್ನು ಜನರ ಮೇಲೆ ಹೇರಲು ಹೊರಟಿರುವ ಸಂಘ ಪರಿವಾರ ಮತ್ತು ಹಿಂದುತ್ವ ಶಕ್ತಿಗಳು ಬಹಿರಂಗವಾಗಿ ಸಂವಿಧಾನದ ವಿರುದ್ಧ ನಿರಂತರ ಅಸಮಾಧಾನವನ್ನು ಹೊರಹಾಕುತ್ತಲೇ ಬರುತ್ತಿವೆ. ಕಳೆದ 10 ವರ್ಷಗಳಲ್ಲಿ ಇದು ಪರಾಕಾಷ್ಠೆ ಹಂತ ತಲುಪಿದೆ. ಬಹುತ್ವವವನ್ನು ನಿರಾಕರಿಸಿ, ಸಂವಿಧಾನ-ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಿಕೊಟ್ಟು ಹಿಂದೂರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿರುವ ಆರ್‌ಎಸ್‌ಎಸ್, ಸಂಘಪರಿವಾರ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಅದಕ್ಕಾಗಿ ಇಡೀ ಯಂತ್ರಾAಗವನ್ನೇ ಬಳಸಿಕೊಳ್ಳುತ್ತಿವೆ, ಇದನ್ನು ವಿರೋಧಿಸುವವರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದೆ ಎಂದು ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
‘ಸಂವಿಧಾನಪರ ಎಲ್ಲ ಮನಸುಗಳು ಒಗ್ಗೂಡಲಿ’
ಸಂಘಪರಿವಾರದ ಮತೀಯವಾದಿಗಳಿಗೆ, ಸಂವಿಧಾನ-ಪ್ರಜಾತಂತ್ರ ವಿರೋಧಿಗಳಿಗೆ ಪಾಠ ಕಲಿಸಲು ಸಂವಿಧಾನಪರ ಮನಸುಗಳು ಎಲ್ಲ ಎಲ್ಲೆಗಳನ್ನು ಮೀರಿ ಒಗ್ಗೂಡಬೇಕು. ದಲಿತ ಸಮುದಾಯದಿಂದ ಬಂದ ವ್ಯಕ್ತಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿರುವುದನ್ನು ಸಹಿಸಿಕೊಳ್ಳದ ರಾಕೇಶ್ ಕುಮಾರ್‌ನಂತಹ ಮನುವಾದಿ-ಜಾತಿವಾದಿ ಹೀನ ಕೃತ್ಯ ಎಸಗಿದ್ದಾನೆ. ಇಂತಹ ದುಷ್ಕರ್ಮಿಗಳಿಗೆ ಹೋರಾಟದ ಮೂಲಕವೇ ಸರಿಯಾದ ಪಾಠ ಕಲಿಸಬೇಕು. ಬಿಜೆಪಿ ಮತ್ತು ಸಂಘಪರಿವಾರ ಸಮಾಜದಲ್ಲಿ ವಿಭಜಕ ಸಿದ್ಧಾಂತವನ್ನು ಹರಡಿರುವುದೇ ಇಂತಹ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ. ಈ ದುಷ್ಕೃತ್ಯದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇದನ್ನೂ ಎಲ್ಲರೂ ಒಟ್ಟಾಗಿ ಖಂಡಿಸಬೇಕು ಎಂದು ತೀರ್ಮಾನಿಸಲಾಯಿತು.
ಅ.14ರಂದು ಎಪಿಎಂಸಿಯಿಂದ ತಹಸೀಲ್ ಕಾರ್ಯಾಲಯದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ
ನಗರದ ಎಪಿಎಂಸಿಯಿಂದ ತಹಸೀಲ್ ಕಾರ್ಯಾಲಯದವರೆಗೆ ಬೆಳಿಗ್ಗೆ 10.30 ಗಂಟೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಎಪಿಎಂಸಿಯಿಂದ ಬಸವ ಸರ್ಕಲ್, ಬಸ್ ನಿಲ್ದಾಣದ ಮುಂಭಾಗ, ಗಾಂಧಿ ಸರ್ಕಲ್ ಮೂಲಕ ತಹಸೀಲ್ ಕಾರ್ಯಾಲಯಕ್ಕೆ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಮೂಲಕ ರಾಷ್ಟಪತಿಯವರಿಗೆ ಮನವಿಪತ್ರ ರವಾನಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಈ ಸಂದರ್ಭದಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿಯ ಸಂಚಾಲಕರಾದ ಡಿ.ಎಚ್.ಕಂಬಳಿ, ಹುಸೇನ್‌ಸಾಬ್, ಖಾದರ್‌ಸುಭಾನಿ, ನಾಗರಾಜ್ ಪೂಜಾರ್, ಬಾಬರ್‌ಪಾಷಾ, ನರಸಪ್ಪ, ಹನುಮಂತಪ್ಪ ಗೋಮರ್ಸಿ, ಜಿಲಾನಿಪಾಷಾ, ಬಸವರಾಜ ಬಾದರ್ಲಿ, ಮೌಲಪ್ಪ ಮಾಡಸಿರವಾರ, ಮೌನೇಶ ಜಾಲವಾಡಗಿ, ಪ್ರವೀಣಕುಮಾರ್ ಧುಮುತಿ, ಆಲಂಬಾಷಾ ಬೂದಿವಾಳ, ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಅಶೋಕ ಜಾಲವಾಡಗಿ, ವಿರುಪಾಕ್ಷಿ ಸಾಸಲಮರಿ, ಸ್ವಾಮಿ ವಿವೇಕಾನಂದ ಉದ್ಬಾಳ(ಇ.ಜೆ), ನವೀನ ಮುದ್ದಾಪುರ, ಹನುಮಂತ ಕರ್ಣಿ, ಮಂಜುನಾಥ ಸಾಸಲಮರಿ, ಹುಲುಗಪ್ಪ ಮಲ್ಕಾಪುರ, ಚಂದ್ರು ಸಿದ್ರಾಂಪುರ, ಮಾರೆಪ್ಪ ರಾಮತ್ನಾಳ, ಶರಣಬಸವ ಮಲ್ಲಾಪುರ, ದುರುಗಪ್ಪ ಮಲ್ಲಾಪುರ, ನಾಗರಾಜ ಬೂದಿವಾಳ, ಬಸವರಾಜ ಹಸಮಕಲ್ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *