ಸಿಂಧನೂರು: ಹಳ್ಳದ ಬ್ರಿಡ್ಜ್‌ನ ಡಿವೈಡರ್‌ಗೆ ಡಿಕ್ಕಿ ಹೊಡೆದ ಲಾರಿ !

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 26, 2026

ನಗರದ ರಾಯಚೂರು ಮಾರ್ಗದ ಯಲ್ಲಮ್ಮ ದೇವಸ್ಥಾನದ ಬಳಿಯಿರುವ ಹಳ್ಳದ ಬ್ರಿಡ್ಜ್‌ನ ಡಿವೈಡರ್‌ಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಮುಂಭಾಗ ನಜ್ಜುಗುಜ್ಜಾದ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಾಯಚೂರಿನಿಂದ ಗಂಗಾವತಿ ಮಾರ್ಗದ ಕಡೆ ಹೊರಟಿದ್ದ ಹೊರ ರಾಜ್ಯದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಅಪಘಾತಕ್ಕೀಡಾದ ಲಾರಿಯನ್ನು ಡಿವೈಡರ್‌ನಿಂದ ತೆರವುಗೊಳಿಸುವ ಕಾರ್ಯಾಚರಣೆ ಬೆಳಿಗ್ಗೆ 9 ಗಂಟೆ ಸುಮಾರು ನಡೆದಿದ್ದು ಕಂಡುಬಂತು.


Spread the love

Leave a Reply

Your email address will not be published. Required fields are marked *