ಸಿಂಧನೂರು: “ಈ ತಿಂಗ್ಳ ಮಳಿ ಆಗ್ಲಿಲ್ಲ ಅಂದ್ರ, ಭಾಳ ಕಷ್ಟ ಐತಿ ನೋಡ್ರಿ”

(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಏರುತ್ತಿರುವ ತಾಪಮಾನದಿಂದ ತಾಲೂಕಿನ ಹಲವು ಕೆರೆ-ಕುಂಟೆ, ಹಳ್ಳಗಳು ಸೇರಿದಂತೆ ತುಂಗಭದ್ರಾ ನದಿಯೂ ಬತ್ತಿದೆ. ಅಂತರ್ಜಲವೂ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಕುಡಿಯುವ ನೀರು, ಬಳಕೆ ನೀರಿನ ಅಭಾವ ಉಂಟಾಗಿದ್ದು, ಜಾನುವಾರು…

ನಮ್ಮ ಸಿಂಧನೂರು, ಮೇ 11ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣುಮಕ್ಕಳನ್ನು, ಅಧಿಕಾರ ಮತ್ತು ಸಾಂದರ್ಭಿಕ ಲಾಭಪಡೆದು, ಲೈಂಗಿಕವಾಗಿ ಶೋಷಣೆ ಮಾಡಿದ್ದು, ಇದನ್ನು ಖಂಡಿಸಿ, ಮೇ 13 ರಂದು, “ಅಬಲೆಯರನ್ನು ಗೌರವಿಸೋಣ-ಅತ್ಯಾಚಾರಿಗೆ…

ಮಸ್ಕಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬುದ್ದಿನ್ನಿ.ಎಸ್. ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ನಮ್ಮ ಸಿಂಧನೂರು, ಮೇ 10ಮಸ್ಕಿ ತಾಲೂಕಿನ ಬುದ್ದಿನ್ನಿ.ಎಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, 24 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅನಿಲಕುಮಾರ್ 499 (79.81%), ಹುಸೇನಬೀ 472 (75.52%), ರೇಖಾ 444 (ಶೇ.71.04) ಅಂಕಗಳನ್ನು…

(ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 10ರಾಯಚೂರು ಜಿಲ್ಲೆಯ ಕಂದಾಯ ಇಲಾಖೆಯ ನಾಡ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಳೆದ 11 ತಿಂಗಳಿಂದಲೂ 1 ಕೋಟಿ ರೂಪಾಯಿಗೂ ಹೆಚ್ಚು ವೇತನ ಪಾವತಿಯಾಗಿಲ್ಲ !!…

ಸಿಂಧನೂರು: ನಾಳೆ ಬಸವೇಶ್ವರ ಜಯಂತಿ

ನಮ್ಮ ಸಿಂಧನೂರು, ಮೇ 9ನಗರದಲ್ಲಿ ನಾಳೆ ಮೇ 10ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತಿಯ ನಿಮಿತ್ತ ವಿವಿಧೆಡೆ ಕಾರ್ಯಕ್ರಮಗಳು ಜರುಗಲಿವೆ. ನಗರದ ಆರ್‌ಜಿಎಂ ಶಾಲಾ ಆವರಣದಲ್ಲಿ ಆಯೋಜಿಸಲಾಗಿರುವ ಪ್ರವಚನ ಕಾರ್ಯಕ್ರಮದಲ್ಲಿ ಸಂಜೆ ಹಲವು ಗಣ್ಯರು ಭಾಗವಹಿಸುವರು. ಚುನಾವಣೆ ನೀತಿ ಸಂಹಿತೆ…

ಸಿಂಧನೂರು: ಬಿರುಗಾಳಿ ಸಹಿತ , ಬಿರುಸಿನ ಮಳೆ

ನಮ್ಮ ಸಿಂಧನೂರು, ಮೇ 9ನಗರದಲ್ಲಿ ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಬಿರುಗಾಳಿ ಸಹಿತ ಬಿರುಸಿನ ಮಳೆ ಆರಂಭವಾಯಿತು. ಮಧ್ಯಾಹ್ನ 2.30ರಿಂದ ಮೋಡ ಕವಿದ ವಾತಾವರಣ ಕಂಡುಬಂತು. ತದನಂತರ 3.50 ನಿಮಿಷಕ್ಕೆ ಮಳೆ ಆರಂಭವಾಯಿತು. ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಬಿಸಿಲ…

ಸಿಂಧನೂರು: 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ 1 ಪೆಂಡಾಲು ! ಕುಳಿತು ಉಣ್ಣಲೂ ನೆರಳಿನ ಅಭಾವ !!

(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 9ಬರೋಬ್ಬರಿ 600ಕ್ಕೂ ಹೆಚ್ಚು ನರೇಗಾ ಕಾರ್ಮಿಕರಿಗೆ ನೆರಳು ಕಲ್ಪಿಸಲು ಹಾಕಿದ್ದು ಒಂದೇ ಒಂದು ಪೆಂಡಾಲು !, ಕೆಲಸ ನಿರ್ವಹಿಸಿದ ಕೂಲಿಕಾರರು ನೆರಳಿನ ಅಭಾವದಿಂದಾಗಿ ಉರಿಬಿಸಿಲಲ್ಲೇ ಕುಳಿತು ಉಂಡರು !! ಇನ್ನೂ ಕೆಲವರು ತಾವೇ…

ಸಿಂಧನೂರು : ಒಳಬಳ್ಳಾರಿ ರಸ್ತೆ ಏನಿದು ಅವಸ್ಥೆ ?

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 8ತಾಲೂಕು ಕೇಂದ್ರದಿಂದ ಅಂದಾಜು 25 ಕಿ.ಮೀ ಅಂತರದಲ್ಲಿರುವ ಒಳಬಳ್ಳಾರಿ ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸರಣಿ ತಗ್ಗು-ದಿನ್ನೆಗಳು, ಡಾಂಬರ್ ಕಿತ್ತಿರುವುದು, ಕಂಕರ್ ತೇಲಿರುವುದು, ಪ್ಯಾಚ್ ವರ್ಕ್ ಮಾಡಿರುವುದನ್ನು ನೋಡಿದವರು, ಇಷ್ಟೊಂದು ಬಗೆಯಲ್ಲಿ ರಸ್ತೆ ದುರಸ್ತಿ…

ಕೊಪ್ಪಳ ಲೋಕ ಕಣ : ರಿಲ್ಯಾಕ್ಸ್ ಮೂಡ್‌ಗೆ ಅಭ್ಯರ್ಥಿಗಳು

ನಮ್ಮ ಸಿಂಧನೂರು, ಮೇ 8ಕೊಪ್ಪಳ ಲೋಕಸಭೆ ಚುನಾವಣೆ ಮಂಗಳವಾರ ಮುಗಿಯುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇನ್ನಿತರೆ ಪಕ್ಷದ ಅಭ್ಯರ್ಥಿಗಳು, ಪಕ್ಷೇತರರು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿದ್ದ ಅಭ್ಯರ್ಥಿಗಳು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಉರಿಬಿಸಿಲ ನಡುವೆಯೂ…

ಸಿಂಧನೂರು: ಆರ್.ಎಚ್.ಕ್ಯಾಂಪ್ ಬಹುಗ್ರಾಮ ಕುಡಿವ ನೀರಿನ ಕೆರೆ ನೀರು ಕುಡಿಯಲು ಆಯೋಗ್ಯ, ಬಳಕೆಗೆ ಮಾತ್ರ ಉಪಯೋಗಿಸಲು ಸೂಚನೆ

ನಮ್ಮ ಸಿಂಧನೂರು, ಮೇ 3ಆರ್.ಎಚ್.ಕ್ಯಾಂಪ್‌ನ ಬಹುಗ್ರಾಮ ಕುಡಿಯುವ ನೀರಿನ ಕೆರೆಯ ನೀರು ಕುಡಿಯಲು ಆಯೋಗ್ಯವಾಗಿದ್ದು, ಬಳಕೆಗೆ ಮಾತ್ರ ಉಪಯೋಗಿಸುವಂತೆ ತಾಲೂಕಿನ ಗೋನವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಮೇ 2ರಂದು ಪ್ರಕಟಣೆ ಹೊರಡಿಸಿರುವ ಪಿಡಿಒ…