ರಾಯಚೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ದಂಧೆಗೆ ಕಡಿವಾಣ ಹಾಕಲು ಸಿಪಿಐ(ಎಂಎಲ್) ರೆಡ್‌ಸ್ಟಾರ್ ಆಗ್ರಹ

ನಮ್ಮ ಸಿಂಧನೂರು, ಮೇ 14ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡುವಂತಾಗಿದೆ. ಕೂಡಲೇ ಇಂತಹ…

ಸಿಂಧನೂರು: ನರೇಗಾ ಕೂಲಿ ಕದಿಯುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹ

ನಮ್ಮ ಸಿಂಧನೂರು, ಮೇ 14ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರ ಕೂಲಿ ಹಣ ಪಾವತಿಯಲ್ಲಿ ತಾರತಮ್ಯ ಮಾಡುತ್ತಿರುವ ದಡೇಸುಗೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜೆಇ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸರ್ಕಾರ ನಿಗದಿಪಡಿಸಿದ ಕೂಲಿ ಹಣ ಪಾವತಿಸುವಂತೆ…

ಸಿಂಧನೂರು: ವಿರುಪಾಪುರ ಸಂಪರ್ಕ ರಸ್ತೆ ಆರಂಭದಲ್ಲೇ ವಿಘ್ನ !

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 13ನಗರದಿಂದ 7ಕಿ.ಮೀ ಅಂತರದಲ್ಲಿರುವ ತಾಲೂಕಿನ ವಿರುಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕೈಗೊಂಡು ನಾಲ್ಕಾರು ತಿಂಗಳಲ್ಲೇ ಕುಸಿದಿದೆ, ನಡುವೆ ಎಲ್ಲೆಂದರಲ್ಲಿ ಕಂಕರ್ ಕಿತ್ತುಹೋಗಿ, ಡಾಂಬರ್ ತೇಲಿ ತಗ್ಗು-ದಿನ್ನೆಗಳು ಬಿದ್ದಿವೆ ಎಂದು ಸಾರ್ವಜನಿಕರು…

ಸಿಂಧನೂರು: ಕುಸಿದ ಡ್ರೈನೇಜ್ ಕಂದಕದಲ್ಲಿ ಸಿಲುಕಿದ ಬೊಲೆರೊ ವಾಹನ !

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 13ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ರಸ್ತೆಯಲ್ಲಿ ಸಹನಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಡೈನೇಜ್ ಕುಸಿದ ಪರಿಣಾಮ ಬೊಲೆರೊ ವಾಹನವೊಂದರ ಚಕ್ರ ಕಂದಕದಲ್ಲಿ ಸಿಲುಕಿ ಚಾಲಕ ಪರದಾಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.…

ಸಿಂಧನೂರು/ಮಸ್ಕಿ : ಸಾಧಾರಣ ಮಳೆ, ಹಸಿಯಾಗದ ಭೂಮಿ

ನಮ್ಮ ಸಿಂಧನೂರು, ಮೇ 13ಸಿಂಧನೂರು ಹಾಗೂ ಮಸ್ಕಿ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಮತ್ತು ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಭಾನುವಾರ ಸಂಜೆ ಮೋಡ ಕವಿದ ವಾತಾವರಣ ಕಂಡುಬಂತು; ಬಿರುಗಾಳಿಯ ಜೊತೆಗೆ ಮಿಂಚು ಗುಡುಗಿನ ಸದ್ದು ಕೇಳಿತಾದರೂ ಮಳೆ ಬರಲಿಲ್ಲ. ರಾತ್ರಿ 12 ಗಂಟೆ…

ವಿಶ್ವ ತಾಯಂದಿರ ದಿನದ ನಿಮಿತ್ತ ನಾಡಿನ ಖ್ಯಾತ ಕವಿ ಪಿ.ಲಂಕೇಶರ ಪ್ರಸಿದ್ಧ ಕವಿತೆ

ಕವಿತೆ : ಅವ್ವನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ, ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ…

ಸಿಂಧನೂರು: ನಗರಸಭೆಯಲ್ಲಿ ನಿಯಮಿತವಾಗಿ ನಡೆಯದ ಕುಡಿವ ನೀರಿನ ಸಭೆ, ಸಾರ್ವಜನಿಕರ ಆರೋಪ

(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ನಗರದಲ್ಲಿ ಬೇಸಿಗೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ, ಸಾರ್ವಜನಿಕರ ಅಹವಾಲು ಕುರಿತಂತೆ ಚರ್ಚಿಸುವ ಹಿನ್ನೆಲೆಯಲ್ಲಿ ನಿಯಮಿತವಾಗಿ ನಗರಸಭೆಯಲ್ಲಿ ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಇದರಿಂದಾಗಿ ನಗರದ 31 ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಜನರು ನೀರಿನ ಅಭಾವ…

ಜವಳಗೇರಾ: ದಲಿತ ಮುಖಂಡ ಚೌರಪ್ಪ ಜವಳಗೇರಾ ನಿಧನ

ನಮ್ಮ ಸಿಂಧನೂರು, ಮೇ 12ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ) ಸಿಂಧನೂರು ತಾಲೂಕು ಸಮಿತಿ ಮಾಜಿ ಸಂಚಾಲಕ, ಜವಳಗೇರಾ ಮಂಡಲ ಪಂಚಾಯಿತಿ ಮಾಜಿ ಉಪ ಪ್ರಧಾನ ಹಾಗೂ ದಲಿತ ಮುಖಂಡರಾಗಿದ್ದ ಚೌರಪ್ಪ ಜವಳಗೇರಾ (65) ಅವರು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಲೂಕು…

ಸಿಂಧನೂರು: ಬೋಂಗಾ ಬಿದ್ದ ಬ್ರಿಡ್ಜ್ ಕುಸಿಯುವ ಭೀತಿ, ರಾಷ್ಟ್ರೀಯ ಹೆದ್ದಾರಿಗೆ ‘ತೆಂಗಿನ ಪೊರಕೆ’ ಆಸರೆ !

(ಜನದನಿ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 12ಅರೇ ಇದೇನು ! ಹೆದ್ದಾರಿಯಲ್ಲೇ ತೆಂಗಿನ ಗಿಡ ಬೆಳೆಯಿತೇ ? ಎಂದು ಅಚ್ಚರಿಯಾಗಬೇಡಿ !! ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿದ್ದು, ಅಪಘಾತ…

ಸಿಂಧನೂರು: ಕುಡಿವ ನೀರಿನ ಕೆರೆಯಲ್ಲಿ ತಳಕ್ಕೆ ಕುಸಿದ ನೀರು !

(ಜನದನಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಮೇ 11ಸಿಂಧನೂರು ನಗರದ ಕುಡಿವ ನೀರಿನ ಪ್ರಮುಖ ಜಲ ಮೂಲವಾಗಿರುವ ಕುಡಿವ ನೀರಿನ ಕೆರೆಯಲ್ಲಿ, ನೀರಿನ ಪ್ರಮಾಣ ತಳಕ್ಕೆ ಕುಸಿದಿದ್ದು, ತುಂಗಭದ್ರಾ ನಾಲೆಗೆ ನೀರು ಹರಿಸುವವರೆಗೆ ಪೂರೈಕೆ ಹೇಗೆ ? ಏನು ಎಂಬ ಪ್ರಶ್ನೆ ನಗರಸಭೆಗೆ…