ಸಿಂಧನೂರು: ಉಜ್ವಲಾ ಯೋಜನೆ ಸಿಲಿಂಡರ್ ಗ್ಯಾಸ್ 9ರಿಂದ 4ಕ್ಕೆ ಇಳಿಕೆ: ಸಿಪಿಐ(ಎಂಎಲ್) ಲಿಬರೇಶನ್ ಖಂಡನೆ

Spread the love

ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 09, 2026

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಿಗೆ ಪ್ರತಿವರ್ಷ ನೀಡುತ್ತಿದ್ದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಸಂಖ್ಯೆಯನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಾಲ್ಕಕ್ಕೆ ಇಳಿಕೆ ಮಾಡಿದ್ದಲ್ಲದೇ ರೂ.29 ಬೆಲೆ ಏರಿಕೆ ಮಾಡಿರುವುದನ್ನು ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಖಂಡಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, “ಹೊಗೆಮುಕ್ತ ಮನೆ ಮಾಡುವುದಾಗಿ ಹೇಳಿ, ಉಜ್ವಲಾ ಯೋಜನೆಯಡಿ ಆರಂಭದಲ್ಲಿ ವರ್ಷಕ್ಕೆ 14.2 ಕೆ.ಜಿ ತೂಕದ 12 ಅಡುಗೆ ಅನಿಲ ಗ್ಯಾಸ್‌ಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಕಳೆದ ವರ್ಷ 9 ಸಿಲಿಂಡರ್‌ಗೆ ಇಳಿಸಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ದಿಢೀರ್ ಎಂದು 5 ಸಿಲಿಂಡರ್ ಗ್ಯಾಸ್ ಕಡಿತ ಮಾಡಿ ಕೇವಲ 4 ಗ್ಯಾಸ್‌ಗಳನ್ನು ಫಲಾನುಭವಿಗಳಿಗೆ ನೀಡುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ. ಪರೋಕ್ಷವಾಗಿ ಕೇಂದ್ರ ಸರ್ಕಾರ ಜನರ ಊಟದ ತಟ್ಟೆಗೆ ಕೈಹಾಕಿದ್ದು, ಉಪವಾಸ ಮಾಡಿ ಎಂದ ಹೇಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೂಲಿ ಜಾಸ್ತಿ ಯಾಕೆ ಮಾಡಿಲ್ಲ ?”
ಕೇಂದ್ರ ಸರ್ಕಾರ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ದೇಶದ ಎಲ್ಲ ದುಡಿಯುವ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಹಣದುಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅಗತ್ಯ ವಸ್ತುಗಳು ಗಗನಮುಖಿಯಾಗಿವೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಯನ್ನು ಏರಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ಬೀದಿಗೆ ತಳ್ಳಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನೆಪವೊಡ್ಡಿ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಕೇಂದ್ರ ಸರ್ಕಾರ, ಕೂಲಿಯನ್ನು ಯಾಕೆ ಜಾಸ್ತಿ ಮಾಡಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.


Spread the love

Leave a Reply

Your email address will not be published. Required fields are marked *