ಸಿಂಧನೂರು: ಹೆಚ್ಚಿದ ತಾಪಮಾನ, ಕರವೇ ಸ್ವಾಭಿಮಾನಿ ಬಣದಿಂದ ಸಾರ್ವಜನಿಕರಿಗೆ ಉಚಿತ ಟೊಪ್ಪಿಗೆ ವಿತರಣೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಮೇ 15, 2026

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ಮಂಜುನಾಥ ಗಾಣಗೇರ ನೇತೃತ್ವದಲ್ಲಿ ಶುಕ್ರವಾರ ನಗರದ ಬಸ್ ನಿಲ್ದಾಣ, ಎಪಿಎಂಸಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಟೊಪ್ಪಿಗೆಗಳನ್ನು ವಿತರಿಸಲಾಯಿತು.

Namma Sindhanuru Click For Breaking & Local News

ತಾಪ ತಡೆಯಲು ಟೊಪ್ಪಿಗೆ ವಿತರಣೆ: ಮಂಜುನಾಥ ಗಾಣಗೇರ
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, “ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಮಾನ 40 ಡಿಗ್ರಿಗೂ ಹೆಚ್ಚು ಇದೆ. ಹೀಗಾಗಿ ಕೆಲಸ ಕಾರ್ಯಗಳಿಗಾಗಿ ಸಂಚರಿಸಲು ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರು ಹೊರಗಡೆ ನಡೆದಾಡುವುದೇ ದುಸ್ತರ ಎನ್ನುವಂತಾಗಿದೆ. ಬಿಸಿಲಿನ ತಾಪದಿಂದ ಸನ್‌ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಮನಗಂಡು ಸಾರ್ವಜನಿಕರಿಗೆ ನಮ್ಮ ಸಂಘಟನೆಯ ವತಿಯಿಂದ ಉಚಿತವಾಗಿ ಟೊಪ್ಪಿಗೆಗಳನ್ನು ವಿತರಿಸಲಾಗಿದೆ” ಎಂದು ಹೇಳಿದರು.

Namma Sindhanuru Click For Breaking & Local News

ಅತಿಥಿಗಳ ಸಾಥ್‌
ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಚಾಲಕರು-ನಿರ್ವಾಹಕರು, ಎಪಿಎಂಸಿ ಹಮಾಲರು ಸೇರಿದಂತೆ ಸಾರ್ವಜನಿಕರಿಗೆ ಉಚಿತವಾಗಿ ಟೊಪ್ಪಿಗೆಗಳನ್ನು ವಿತರಿಸಲಾಯಿತು. ಅತಿಥಿಗಳಾದ ಹಾರೂನ್ ಪಾಷಾ ಜಾಗೀರ್‌ದಾರ, ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸವಸ್ವಾಮಿ ಹಿರೇಮಠ, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನಾಗವೇಣಿ.ಎಸ್.ಪಾಟೀಲ್, ಕರವೇ ಕನ್ನಡಸೇನೆ ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಟೊಪ್ಪಿಗೆಗಳನ್ನು ವಿತರಿಸಿದರು.

Namma Sindhanuru Click For Breaking & Local News

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಬೀರಪ್ಪ ಹಾಲಾಪುರ, ಶರಣಬಸವ ನಾಯಕ, ಶ್ರೀಕಾಂತ್ ಜವಳಿ, ಯಲ್ಲಪ್ಪ ಕೋಣದ, ಅಶೋಕ, ಮಲ್ಲಿಕಾರ್ಜುನ ಕುನ್ನಟಗಿ, ಸಿದ್ರಾಮೇಶ ಸುಲ್ತಾನಾಪುರ, ಮಲ್ಲಪ್ಪ ಕುರಿ, ನಿಂಗರಾಜ ವಿರುಪಾಪುರ, ಆದಿ ಹಿರೇಮಠ, ವಿಶ್ವನಾಥ ಕಾವೇರಿ ಹೋಟೆಲ್, ರಾಜು, ಚನ್ನಬಸವಸ್ವಾಮಿ ಹಿರೇಮಠ, ಭಾನು ಸೋಮಲಾಪುರ ಇನ್ನಿತರರಿದ್ದರು.

Namma Sindhanuru Click For Breaking & Local News
Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *