ಸಿಂಧನೂರು: ಸಿಜೆಐಯವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿಯವರ ಮೇಲೆ ಶೂ ಎಸೆದು, ಗೂಂಡಾವರ್ತನೆ ತೋರಿದ ದುಷ್ಕರ್ಮಿಯ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ ಹಟ್ಟಿ ಅವರ ಮೂಲಕ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ವತಿಯಿಂದ ಬುಧವಾರ ಮನವಿ ರವಾನಿಸಲಾಯಿತು.
ಕಲಾಪದ ವೇಳೆಯಲ್ಲೇ ಸಿಜೆಐ ಅವರಿಗೆ ಇಂತಹ ಪರಿಸ್ಥಿತಿಯಾದರೆ ದೇಶದ ದಲಿತರನ್ನು ರಕ್ಷಿಸುವವರು ಯಾರು ಎನ್ನುವ ಆತಂಕ ಎದುರಾಗಿದೆ. ಸಿಜೆಐ ಅವರ ಮೇಲೆ ನಡೆದ ದಾಳಿ ಇಡೀ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ಮೇಲೆ ಸನಾತನವಾದಿಗಳು-ಮನುವಾದಿಗಳು ನಡೆಸುತ್ತಿರುವ ದುರಾಕ್ರಮಣವಾಗಿದೆ. ತಮ್ಮ ಪರವಾಗಿ ತೀರ್ಪು ನೀಡದೇ ಹೋದರೆ ತಾವು ಸುಮ್ಮನಿರುವುದಿಲ್ಲ ಎಂಬ ರೀತಿಯಲ್ಲಿ ಪರೋಕ್ಷವಾಗಿ ನ್ಯಾಯಾಂಗ ವ್ಯವಸ್ಥೆಗೆ ಬೆದರಿಕೆ ಹಾಕಿದಂತಾಗಿದೆ. ಇದು ನ್ಯಾಯ ನಿರ್ಣಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಉಮೇಶ ಬಾಲಿ, ಜಿಲ್ಲಾ ಕಾರ್ಯದರ್ಶಿ ನಿರುಪಾದಿ.ವಿ.ಬಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಬೊಮ್ಮನಾಳ ಸೇರಿದಂತೆ ಇನ್ನಿತರರಿದ್ದರು.


Spread the love
ಟ್ಯಾಗ್‌ಗಳು: ,

Leave a Reply

Your email address will not be published. Required fields are marked *