ನಮ್ಮ ಸಿಂಧನೂರು, ಆಗಸ್ಟ್ 31
ಸುಪ್ರೀಂ ಕೋರ್ಟ್ನ ಒಳ ಮೀಸಲಾತಿ ಪರವಾದ ತೀರ್ಪು ಸ್ವಾಗತಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನುಸಾರ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ದಿನಾಂಕ: 20-09-2024ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದರ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಪ್ರಮುಖರ ಸಭೆ ಮಸ್ಕಿ ಪಟ್ಟಣದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ನಡೆಯಿತು. ಸಭೆಯಲ್ಲಿ ಸಾಹಿತಿ ದಾನಪ್ಪ ನಿಲೋಗಲ್, ದೊಡ್ಡಪ್ಪ ಮುರಾರಿ, ಎಚ್.ಬಿ.ಮುರಾರಿ, ಪಾಮಯ್ಯ ಮುರಾರಿ, ಮಲ್ಲಯ್ಯ ಬಳ್ಳ, ಸುರೇಶ್ ಅಂತರಗಂಗೆ, ಹನುಮಂತಪ್ಪ ವೆಂಕಟಾಪುರ ಇನ್ನಿತರ ಮುಖಂಡರು ಪ್ರತಿಭಟನೆಯ ರೂಪುರೇಷೆಯ ಕುರಿತು ವಿಸ್ತೃತವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು, ಪ್ರಮುಖರು ಉಪಸ್ಥಿತರಿದ್ದರು.