ಸಿಂಧನೂರು: ಎಲ್‌ಬಿಕೆ, ನೋಬಲ್ ಕಾಲೇಜಿನಲ್ಲಿ ಮೇ ಸಾಹಿತ್ಯ ಮೇಳದ ಪ್ರಚಾರಾಂದೋಲನ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 14

ನಗರದ ಸತ್ಯಾ ಗಾರ್ಡನ್‌ನಲ್ಲಿ ಮೇ 17, 18ರಂದು ಎರಡು ದಿನಗಳ ಕಾಲ ‘ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ, ಅಂದು-ಇಂದು’ ಘೋಷವಾಕ್ಯದಡಿ ರಾಜ್ಯಮಟ್ಟದ ಸಾಹಿತ್ಯ ಮೇಳ ಆಯೋಜಿಸಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಎಲ್‌ಬಿಕೆ ಪದವಿ ಪೂರ್ವ ಕಾಲೇಜು ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯದಲ್ಲಿ ಮೇಳದ ಆಶಯದ ಕುರಿತು ವಿವರಣೆ ನೀಡುವುದರೊಂದಿಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಉಪನ್ಯಾಸಕರಾದ ಪರಶುರಾಮ ಮಲ್ಲಾಪುರ, ಡಾ.ಅರುಣಕುಮಾರ ಭೇರಿಗಿ ಸೇರಿ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *