ಸಿಂಧನೂರು ಕೆರೆ ನೀರಿನ ಪ್ರಮಾಣ ಕುಸಿತ, ತುರ್ವಿಹಾಳ ಕೆರೆಯೇ ಆಸರೆ !

Spread the love

ಲೋಕಲ್ ಸುದ್ದಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಜುಲೈ 2, 2026

ಸಿಂಧನೂರಿನ ಕೆರೆ ನೀರಿನ ಪ್ರಮಾಣ ಕುಸಿತವಾಗಿದ್ದು, ಆದರೆ ತುರ್ವಿಹಾಳ ಪಟ್ಟಣ ಸಮೀಪದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ನಗರದ ನಾಗರಿಕರಿಗೆ ಆಸರೆಯಾಗಿದೆ.
ನಗರದ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ ಅಂದಾಜು ಒಂದೂವರೆಯಿಂದ 2 ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ತುರ್ವಿಹಾಳ ಕೆರೆಯಿಂದ ನೇರವಾಗಿ ನೀರನ್ನು ನಗರದ 31 ವಾರ್ಡ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದ ವೇಳೆ ತುರ್ವಿಹಾಳ ಕೆರೆ ಹಾಗೂ ನಗರದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿತ್ತು. ಬೇಸಿಗೆಯ ಕಾರಣದಿಂದ ನೀರಿನ ಬೇಡಿಕೆ ಹೆಚ್ಚಿ ನಗರದ ಕುಡಿಯುವ ನೀರಿನ ಕೆರೆ ಬೇಗನೆ ಖಾಲಿಯಾಗಿದ್ದು, ಪ್ರಸ್ತುತ ತುರ್ವಿಹಾಳ ಕೆರೆಯ ನೀರನ್ನು ನಗರಕ್ಕೆ ಪೂರೈಸಲಾಗುತ್ತಿದೆ.
‘ನೀರಿಗಾಗಿ ಆತಂಕಪಡುವ ಅಗತ್ಯವಿಲ್ಲ’
“ಸದ್ಯ ಸಿಂಧನೂರು ಕೆರೆಯಲ್ಲಿ ನೀರು ಕಡಿಮೆ ಇರಬಹುದು, ಆದರೆ ತುರ್ವಿಹಾಳ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿದೆ. ಅಂದಾಜು ಇನ್ನೂ ಮೂರು ಇಲ್ಲವೇ ಮೂರುವರೇ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ ನಾಗರಿಕರು ಆತಂಕಪಡುವ ಅಗತ್ಯವಿಲ.್ಲ ಈಗ ಪ್ರತಿ 8 ದಿನಕ್ಕೊಮ್ಮೆ ಆಯಾ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ನೀರಿನ ಕೊರತೆ ಮಾತ್ರ ಇಲ್ಲ. ಆದರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು” ಎಂದು ನಗರಸಭೆಯ ಕುಡಿಯುವ ನೀರಿನ ನಿರ್ವಹಣೆಯ ಸಿಬ್ಬಂದಿ ಹೇಳುತ್ತಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *