ಲೋಕಲ್ ನ್ಯೂಸ್: ಬಸವರಾಜ.ಎಚ್
ನಮ್ಮ ಸಿಂಧನೂರು, ಜೂನ್ 13
ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ವ್ಯಾಪ್ತಿಯ ಪದವಿ ಕಾಲೇಜ್‌ನ ಪರೀಕ್ಷಾ ಕೇಂದ್ರಕ್ಕೆ ವಿವಿಯ ರಾಯಚೂರು ಜಿಲ್ಲೆಯ ಪರೀಕ್ಷಾ ವಿಚಕ್ಷಣ ದಳದ ಅಧಿಕಾರಿಗಳಾದ ಪ್ರೊ.ಎಸ್.ಸಾಹು, ಡಾ.ರೇಣುಕಾ ರೆಡ್ಡಿ ಹಾಗೂ ಪ್ರೊ.ಲಕ್ಷ್ಮಿ ಹೆಬ್ಬಾಳ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಚಕ್ಷಣ ದಳ, ಪರೀಕ್ಷಾ ಕೇಂದ್ರದಲ್ಲಿನ ಸಿ.ಸಿ.ಕ್ಯಾಮೆರಾ, ಪರೀಕ್ಷೆಗಳು ನೈಜವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿತು. ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಇದ್ದರು.