ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 7, 2026
ಗಾಂಜಾ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರೂ. 20,07,400 ಬೆಲೆಬಾಳುವ ಒಣ ಗಾಂಜಾ ಹಾಗೂ ಬೈಕ್‌ವೊಂದನ್ನು ಬಳಗಾನೂರು ಠಾಣೆ ಪೊಲೀಸರು ದಿನಾಂಕ: 06-07-2026ರಂದು ಜಪ್ತಿ ಮಾಡಿಕೊಂಡಿದ್ದಾರೆ.
ಆರ್.ಎಚ್.ಕ್ಯಾಂಪ್ 2ರ ಧೀನಬಂದು ಮಂಡಲ್, ಬಸವರಾಜೇಶ್ವರಿ ಕ್ಯಾಂಪ್‌ನ ಶಂಭು ಸರ್ದಾರ್ ಬಂಧಿತ ಆರೋಪಿತರು. ಆರೋಪಿತರ ವಿರುದ್ಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:11I/2026 ಕಲಂ 20(b)(ii)(C) NDPS Act 1985 ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಎಸ್ಪಿ ಅರುಣಾಂಗ್ಷು ಗಿರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

