ರಾಯಚೂರು : ಕಲುಷಿತ ನೀರು ಪೂರೈಕೆ, ರಾಯಚೂರು ಜಿಲ್ಲೆ ಹಾಗೂ ಇತರ ಪ್ರಕರಣಗಳಲ್ಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಲು ಹೈಕೋರ್ಟ್ ಆದೇಶ

ನಮ್ಮ ಸಿಂಧನೂರು, ಜೂನ್ 11ರಾಯಚೂರು ನಗರ, ದೇವದುರ್ಗ ತಾಲೂಕು ಹಾಗೂ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್…

ಸಿಂಧನೂರು: ಊರೂರಲ್ಲೂ ಆಲ್ಕೋಹಾಲ್ ಜಾಲ ?

(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 10“ನೋಡ್ರಿ ಏನಿಲ್ಲಂದ್ರ ನಮ್ಮೂರಾಗ ಎಂಟರಿಂದ ಹತ್ತು ಬಾಟ್ಲಿ ಅಂಗಡಿ ಅದ್ಯಾವ. ನೀವು ಯಾವ ದಾರಿಗೆ ಹೋದ್ರೂ ಒಂದನ ಅಂಗಡಿ ಇರತೈತಿ, ಒಂದೊಂದ ಅಂಗಡಿಗೆ ಸರಿ ಸುಮಾರು ದಿನಾ ಎರಡರಿಂದ ಮೂರು ಸಾವರ ರೂಪಾಯಿ…

ಮಸ್ಕಿ : ಬಿಜೆಪಿಯಿಂದ ಸೋಲಿನ ಆತ್ಮಾವಲೋಕನ ಸಭೆ

ನಮ್ಮ ಸಿಂಧನೂರು, ಜೂನ್ 10ಮಸ್ಕಿ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಕುರಿತು ಆತ್ಮಾವಲೋಕನ ಸಭೆ ಸೋಮವಾರ ನಡೆಯಿತು. ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಎಡಬಿಡದೇ…

ಸಿಂಧನೂರು : ಅವಘಡಕ್ಕೆ ಕಾದು ನಿಂತ ಡಿವೈಡರ್ ವಿದ್ಯುತ್ ಕಂಬ !

ನಮ್ಮ ಸಿಂಧನೂರು, ಜೂನ್ 10ನಗರದ ರಾಯಚೂರು ಮಾರ್ಗದ ಮುಖ್ಯ ರಸ್ತೆಯಲ್ಲಿ ಎಚ್.ಕೆ.ಜಿ.ಎನ್.ಆಟೋ ವರ್ಕ್ಸ್ ಎದುರುಗಡೆ ಇರುವ ಡಿವೈಡರ್‌ಗೆ ಮೇವಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್ ಕಂಬ ಜಖಂಗೊಂಡಿತ್ತು. ಅದನ್ನು ಸರಿಪಡಿಸದೇ ಹಾಗೆಯೇ ಬಿಟ್ಟಿದ್ದು, ಅವಘಡಕ್ಕೆ ಆಹ್ವಾನ ನೀಡಿದಂತಾಗಿದೆ ಎಂದು ಸಾರ್ವಜನಿಕರ…

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 10ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಹಳ್ಳಕ್ಕೆ ಕೆಲ ದಿನಗಳ ಹಿಂದೆ ಹೊಸ ಬ್ರಿಡ್ಜ್ ನಿರ್ಮಿಸಿ, ಕೆಲಸ ಬಾಕಿ ಉಳಿಸಿ ಗುತ್ತಿಗೆದಾರರು ಕೈ ಎತ್ತಿದ್ದು, ಬ್ರಿಡ್ಜ್ ಮೇಲೆ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಮಾಡುವವರು ಯಾರು…

ಸಿಂಧನೂರು: ಮುಸುಕಿದ ಮೋಡ, ಜಿನಿ ಜಿನಿ ಹನಿ

ನಮ್ಮ ಸಿಂಧನೂರು, ಜೂನ್‌ 10ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಹನಿ ಸುರಿಯಿತು. ಭಾನುವಾರ ರಾತ್ರಿಯೂ ಮೋಡ ಕವಿದ ವಾತಾವರಣವಿತ್ತಾದರೂ ಜಿಟಿ ಜಿಟಿ ಮಳೆಯ ಹೊರತುಪಡಿಸಿ ದೊಡ್ಡ ಮಳೆ ಸುರಿದಿಲ್ಲ. ಕಳೆದ…

ಸಿಂಧನೂರು : ತುಂಗಭದ್ರಾ ಡ್ಯಾಂ ಒಳ ಹರಿವು 4,817 ಕ್ಯೂಸೆಕ್‌ಗೆ ಏರಿಕೆ

ನಮ್ಮ ಸಿಂಧನೂರು, ಜೂನ್ 10ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 10-06-2024 ಸೋಮವಾರ ದಂದು 4,817 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಒಳಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಜನಸಾಮಾನ್ಯರ ಖುಷಿಗೆ ಕಾರಣವಾಗಿದೆ. ಈ ನಡುವೆ ಕಳೆದ ಮರ‍್ನಾಲ್ಕು ದಿನಗಳಿಂದ…

ಸಿಂಧನೂರು : ತುಂಗಭದ್ರಾ ಡ್ಯಾಂಗೆ 1,490 ಕ್ಯೂಸೆಕ್ ಒಳಹರಿವು

ನಮ್ಮ ಸಿಂಧನೂರು, ಜೂನ್ 8ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 8-06-2024ರಂದು 1490 ಕ್ಯೂಸೆಕ್ ನೀರು ಹರಿದು ಬಂದಿದೆ. ಹಾಗೆ ನೋಡಿದರೆ ದಿನಾಂಕ: 7-06-2024ರಂದು 2,190 ಕ್ಯೂಸೆಕ್ ಇದ್ದ ಒಳಹರಿವು, ಏಕಾಏಕಿ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂ ತುಂಬಲು ಇನ್ನೂ 4 ಅಡಿ…

ಮಸ್ಕಿ: ಹಸಮಕಲ್ ಕುಡಿಯುವ ನೀರಿನ ಕೆರೆ ಖಾಲಿ

ನಮ್ಮ ಸಿಂಧನೂರು, ಜೂನ್ 8ಮಸ್ಕಿ ಸಮೀಪದ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಸಮಕಲ್ ಗ್ರಾಮದ ಕುಡಿಯುವ ನೀರಿನ ಕೆರೆ ತಳಕಂಡಿದ್ದು, 4 ಗ್ರಾಮ ಸೇರಿ 2 ಕ್ಯಾಂಪ್‌ಗಳ ಜನ ಹಾಗೂ ಜಾನುವಾರುಗಳು ನೀರಿನ ಸಮಸ್ಯೆಗೆ ಸಿಲುಕಿವೆ.ಗ್ರಾಮದ ಕೆರೆಯಿಂದ ಗುಡದೂರು, ಹಸಮಕಲ್,…

(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಜೂನ್ 8ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಮಟ್ಕಾ, ಜೂಜಾಟ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆರೋಪಗಳಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ತಿಂಗಳು ಮೇ 27ರಿಂದ ಇಲ್ಲಿಯವರೆಗೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ…