ಸಿಂಧನೂರು: ಫೌಂಡೇಶನ್‌ನಿಂದ ವಿತರಣಾ ಕಾಲುವೆ ಹೂಳೆತ್ತುವ ಕಾರ್ಯ: ರೈತರ ಮೆಚ್ಚುಗೆ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 12, 2026

ಕಳೆದ ಹಲವು ದಿನಗಳಿಂದ ಬಸನಗೌಡ ಫೌಂಡೇಶನ್ ವತಿಯಿಂದ ಎಡದಂಡೆ ಮುಖ್ಯ ಕಾಲುವೆಯ ವ್ಯಾಪ್ತಿಯಲ್ಲಿ ಬರುವ 36ನೇ ಉಪಕಾಲುವೆ ವೆಂಕಟೇಶ್ವರ ಕ್ಯಾಂಪಿನಿಂದ-ಬೂದಿವಾಳ ಕ್ಯಾಂಪಿನವರೆಗೆ ನಡೆದ ಸ್ವಚ್ಛತಾ ಹಾಗೂ ಹೂಳೆತ್ತುವ ಕಾರ್ಯಕ್ಕೆ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Namma Sindhanuru Click For Breaking & Local News
ಸ್ವಚ್ಛತೆ ಹಾಗೂ ಹೂಳು ತೆಗೆದ ನಂತರ ಕಂಡುಬಂದ 36ನೇ ವಿತರಣಾ ಕಾಲುವೆಯ ದೃಶ್ಯ.

20 ಗ್ರಾಮಗಳ, 52 ಕೆರೆಗಳ ಜಲಮೂಲ
ಅಂದಾಜು 40 ಕಿ.ಮೀ ಉದ್ದದ 36ನೇ ವಿತರಣಾ ಕಾಲುವೆ 20ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ನೀರಿನ ಸಂಪರ್ಕ ಕಲ್ಪಿಸುತ್ತದೆ; ಅಲ್ಲದೇ 52 ಕೆರೆಗಳಿಗೆ ನೀರಿನ ಪ್ರಮುಖ ಜಲಮೂಲವಾಗಿದೆ. ಈ ಕಾಲುವೆಯಲ್ಲಿ ತ್ಯಾಜ್ಯ ಹಾಗೂ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿತ್ತು.
ರೈತರಿಂದ ಸನ್ಮಾನ
ಆರ್‌ಕೆಡಿಸಿಸಿ ನಿರ್ದೇಶಕರು ಹಾಗೂ ಫೌಂಡೇಶನ್‌ನ ಸೋಮನಗೌಡ ಬಾದರ್ಲಿ ಅವರನ್ನು ಈ ಕಾಲುವೆ ವ್ಯಾಪ್ತಿಯ ರೈತರು ಹಾಗೂ ಗ್ರಾಮದ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಕುಡಿಯುವ ನೀರು ಹರಿಬಿಡುವ ಸಂದರ್ಭದಲ್ಲಿ ಕಾಲುವೆ ಸ್ವಚ್ಛಗೊಳಿಸಿ, ಹೂಳೆತ್ತಿರುವುದಕ್ಕೆ ಮೆಚ್ಚುವೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರು, ಗ್ರಾಮಸ್ಥರು ಇನ್ನಿತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *