ಸಿಂಧನೂರು: ಜೂನ್‌ 14ಕ್ಕೆ ಭೋವಿ (ವಡ್ಡರ) ಸಮಾಜದಿಂದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Spread the love

ಲೋಕಲ್‌ ನ್ಯೂಸ್‌: ಬಸವರಾಜ ಹಳ್ಳಿ, ಹಸಮಕಲ್‌
ನಮ್ಮ ಸಿಂಧನೂರು, ಜೂನ್‌ 12, 2026

2025-26ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಭೋವಿ (ವಡ್ಡರ) ಸಮಾಜ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ನಿವೃತ್ತ ಸರ್ಕಾರಿ ಅಧಿಕಾರಿಗಳಿಗೆ ಸನ್ಮಾನ ಸಮಾರಂಭವನ್ನು ದಿನಾಂಕ: 14-06-2026ರಂದು ನಗರದ ಕುಷ್ಟಗಿ ಮಾರ್ಗದ ರಸ್ತೆಯ ಸರ್ಕ್ಯೂಟ್‌ಹೌಸ್‌ನ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ವೀರೇಶ ಸಿದ್ರಾಂಪೂರ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸುವ ಹಿನ್ನೆಲೆಯಲ್ಲಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ನಿವೃತ್ತ ಅಧಿಕಾರಿಗಳಾದ ಟಿ.ಅಂಬಣ್ಣ ಹಾಗೂ ಎ.ಹನುಮಂತಪ್ಪ ಉಮಲೂಟಿ ಅವರನ್ನು ಸನ್ಮಾನಿಸಲಾಗುವುದು. ಈ ಸಮಾರಂಭದಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ ಅವರು ಸೇರಿದಂತೆ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಹಾಗಾಗಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು” ಎಂದು ಕೋರಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮಾಜಿ ಅಧ್ಯಕ್ಷ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕೆ.ನಾಗಪ್ಪ ಕಲ್ಲೂರು, ತಾಲ್ಲೂಕು ಅಧ್ಯಕ್ಷ ಆನಂದ ಆಯನೂರು, ಯುವ ಘಟಕದ ಅಧ್ಯಕ್ಷ ಹನುಮೇಶ ಭೋವಿ, ಮಾಜಿ ಅಧ್ಯಕ್ಷ ಮರಿಯಪ್ಪ ಬಂಡಿ, ಶಂಕರ ಬ್ಯಾಡಗಿ ವಿರುಪಾಪುರ, ಜಿಲ್ಲಾ ಸಮಿತಿ ಸಲಹೆಗಾರ ಲಕ್ಷ್ಮಣ ಸಾಲಗುಂದಾ, ನಗರ ಘಟಕ ಅಧ್ಯಕ್ಷ ರವಿ ಗೆಜ್ಜಳ್ಳಿ, ವೆಂಕಟೇಶ ತುರವಿಹಾಳ, ಹುಲಗಪ್ಪ ಮಾಸ್ತರ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *