ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು.ಮೇ 1, 2026
ಈಗಾಗಲೇ ಕಾರ್ಮಿಕರು ಹಲವು ರೀತಿಯ ಶೋಷಣೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾರ್ಪೋರೇಟ್ ಬಂಡವಾಳಿಗರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹೊಸ ಕಾರ್ಮಿಕ ಸಂಹಿತೆಗಳು ಜಾರಿಗೆ ತಂದು ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ಇದರಿಂದ ಬರುವ ದಿನಗಳಲ್ಲಿ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟಕ್ಕೀಡಾಗಲಿದೆ ಎಂದು ಹೋರಾಟಗಾರ ಚಂದ್ರಶೇಖರ ಗೊರಬಾಳ ಹೇಳಿದರು.
ನಗರದ ಎಐಟಿಯುಸಿ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಿನವಿಡೀ ದುಡಿಯುವ ಕಾರ್ಮಿಕರಿಗೆ ಕನಿಷ್ಠ ಕೂಲಿ ಇಲ್ಲ, ಶಾಸನಬದ್ಧ ಸೌಲಭ್ಯಗಳು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೆಲಸದ ಅವಧಿಯನ್ನು 8 ಗಂಟೆಯಿAದ 12 ಗಂಟೆಗೆ ಹೆಚ್ಚಿಸುವ ಮೂಲಕ ಬಂಡವಾಳಿಗರ ಏಜೆಂಟನAತೆ ಸರ್ಕಾರ ಕಾಯ್ದೆ ರೂಪಿಸಿದೆ. ಇಡೀ ದೇಶದ ಕಾರ್ಮಿಕರ ಜೀವನಮಟ್ಟ ಕುಸಿದಿದ್ದು, ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾರದಂತಹ ಅಸಹಾಯಕ ಸ್ಥಿತಿಗೆ ತಲುಪಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಭಾಷುಮಿಯಾ ಅವರು ಮಾತನಾಡಿ, ಕಾರ್ಮಿಕ ವರ್ಗದ ಹಿತ ಒಗ್ಗಟ್ಟಿನಲ್ಲಿ ಅಡಗಿದೆ. ರೈತರು ಹಾಗೂ ಕಾರ್ಮಿಕರು ಒಗ್ಗೂಡಿ ದೇಶದ ಸಂಪತ್ತನ್ನು ಬಹುರಾಷ್ಟಿçÃಯ ಕಂಪನಿಗಳಿಗೆ ಹರಾಜು ಹಾಕುತ್ತಿರುವ ಸರ್ಕಾರಗಳನ್ನು ಕಿತ್ತೊಗೆಯಬೇಕು, ಆ ಮೂಲಕ ರೈತರು ಹಾಗೂ ಕಾರ್ಮಿಕರು ನೇತೃತ್ವದ ಜನಾಧಿಕಾರದ ಸರ್ಕಾರ ರಚಿಸಬೇಕು ಎಂದು ಹೇಳಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ವೆಂಕನಗೌಡ ಗದ್ರಟಗಿ, ಡಿ.ಎಚ್.ಕಂಬಳಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಹನುಮಂತ ಹಂಚಿನಾಳ, ಪ್ರಕಾಶ್, ನಾಗರಾಜ ಎ.ಕೆ.ಗೋಪಾಲನಗರ, ರಾಜಸಾಬ ಗಂಗನಾಳ, ಬಲರಾಮ್, ಸುಭಾನ್‌ಸಾಬ್ ಸೇರಿದಂತೆ ಇನ್ನಿತರರಿದ್ದರು. ಇದಕ್ಕೂ ಮುನ್ನ ಕಾರ್ಮಿಕ ಧ್ವಜಾರೋಹಣವನ್ನು ನೆರವೇರಿಸಲಾಯಿತು.
