ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 20
ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಹಿರಿಯ ಧುರೀಣ ರವಿಕೃಷ್ಣಾರೆಡ್ಡಿ ಅವರು ಮಂಗಳವಾರ ಸಂಜೆ ಭೇಟಿ ನೀಡಿದರು. ಇತ್ತೀಚೆಗೆ ನಗರದಲ್ಲಿ ನಡೆದ ಗಲಾಟೆಯೊಂದರಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಹಲ್ಲೆಗೊಳಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ್ದಾರೆ ಎಂದು ಪಕ್ಷದ ಕಾಯಕರ್ತರೊಬ್ಬರು ತಿಳಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೃಷ್ಣ ಎಂಬುವವರ ಆರೋಗ್ಯ ವಿಚಾರಿಸಿದ ಅವರು, ಕೆಲಕಾಲ ಚರ್ಚಿಸಿದರು. ಈ ಸಂದಭದಲ್ಲಿ ಪಕ್ಷದ ಮುಖಂಡರಾದ ನಿರುಪಾದಿ ಗೋಮರ್ಸಿ ಸೇರಿದಂತೆ ಇನ್ನಿತರರು ಇದ್ದರು.

