ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 7
ತೈಲ ಸಂಪದ್ಭರಿತ ರಾಷ್ಟç ವೆನೆಜುವೆಲಾದ ಮೇಲೆ ಅಮೆರಿಕಾದ ಮಿಲಿಟರಿ ದಾಳಿ ಹಾಗೂ ಅಧ್ಯಕ್ಷ ನಿಕೊಲಸ್ ಮಡೊರಾ ಮತ್ತು ಅಧ್ಯಕ್ಷರ ಪತ್ನಿ ಸಿಲಿಯಾ ಪ್ಲೋರ್ಸ್ ಬಂಧನವನ್ನು ಖಂಡಿಸಿ, ಎಡ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಗಾಂಧಿವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ವೆನೆಜುವೆಲಾದ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ದುರಾಕ್ರಮಣ ಮಾಡಿರುವುದು, ವಿಶ್ವಸಂಸ್ಥೆಯ ನಿಯಮಗಳ ಪಷ್ಟ ಉಲ್ಲಂಘನೆಯಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಸಾಮ್ರಾಜ್ಯಶಾಹಿ ಅಮೆರಿಕಾ ವೆನೆಜುವೆಲಾದ ದಾಳಿ ನಡೆಸುವ ಮೂಲಕ ಇತರೆ ದೇಶಗಳ ಶಾಂತಿ ಮತ್ತು ಸ್ಥಿರತೆ, ಸೌರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಬೆದರಿಕೆಯೊಡ್ಡಿದೆ. ಮಡೊರಾ ಮತ್ತು ಅವರ ಪತ್ನಿಯನ್ನು ಅಪಹರಿಸಿ ಬಂಧಿಸಿರುವ ಕೃತ್ಯವು ಅಮೆರಿಕದ ಭಯೋತ್ಪಾದಕ ದಾಳಿಯಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಇರಾನ್, ಇರಾಕ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಳ್ಳು ಆರೋಪಿಸಿ ದಾಳಿ ನಡೆಸಿದ್ದಲ್ಲದೇ, ಇಸ್ರೇಲ್‌ನ್ನು ಎತ್ತಿಗಟ್ಟಿ ಪ್ಯಾಲೆಸ್ತೇನ್, ಗಾಜಾದ ಮೇಲೆ, ಉಕ್ರೇನ್ ಎತ್ತಿಗಟ್ಟಿ ರಷ್ಯಾದ ಮೇಲೆ ಪರೋಕ್ಷ ದಾಳಿ ನಡೆಸುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ. ಅಷ್ಟೇ ಅಲ್ಲದೇ ನೈಸರ್ಗಿಕ ಸಂಪಧ್ಬರಿತ ರಾಷ್ಟçಗಳನ್ನು ಗುರಿಯಾಗಿಸಿಕೊಂಡು ಅಲ್ಲಿನ ಸೌರ್ವಭೌಮತ್ವವನ್ನು ಕಿತ್ತೊಗೆಯಲು ಮಿಲಿಟರಿ ದಾಳಿ ನಡೆಸುತ್ತಿರುವ ಅಮೆರಿಕಾ ಮತ್ತು ಅದರ ನೀತಿಗಳು ಇಡೀ ವಿಶ್ವಕ್ಕೆ ಗಂಡಾಂತರಕಾರಿಯಾಗಿದ್ದು, ವೆನೆಜುವೆಲಾದ ಮೇಲಿನ ದಾಳಿಯ ನಿಜವಾದ ಉದ್ದೇಶ – ಅಲ್ಲಿನ ಜನರ ರಾಷ್ಟ್ರೀಯ ಸಾರ್ವಭೌಮತ್ವ, ರಾಜಕೀಯ ಸ್ವಾತಂತ್ರ‍್ಯ ಮತ್ತು ತಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕನ್ನು ಕಿತ್ತುಕೊಂಡು, ಅಲ್ಲಿನ ತೈಲ ಮತ್ತು ಖನಿಜ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದು ಮತ್ತು ಪ್ರತಿಗಾಮಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡು ಬಲವಂತದ ಆಡಳಿತವನ್ನು ಹೇರುವುದಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ವೆನೆಜುವೆಲಾದ ವಿರುದ್ಧದ ದುರಾಕ್ರಮಣ ಮತ್ತು ಅಮೆರಿಕದ ಸಶಸ್ತç ಪಡೆಗಳು ಅದರ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿದ್ದಕ್ಕೆ ಕೇಂದ್ರ ಸರ್ಕಾರ ನೀಡಿದ ಪ್ರತಿಕ್ರಿಯೆ ಭಾರತವು ಇತರ ರಾಷ್ಟ್ರಗಳ ಸ್ವಾತಂತ್ರ‍್ಯ ಮತ್ತು ಸಾರ್ವಭೌಮತ್ವದ ರಕ್ಷಣೆಯ ಬಗ್ಗೆ ದೀರ್ಘಕಾಲದಿಂದ ತಳೆದುಕೊಂಡು ಬಂದಿರುವ ನಿಲುವಿಗೆ ತಕ್ಕುದಾಗಿಲ್ಲ. ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯು ‘ವೆನೆಜುವೆಲಾದ ಬೆಳವಣಿಗೆಗಳ ಬಗ್ಗೆ ‘ಆಳವಾದ ಕಳವಳ’ವನ್ನು ಮಾತ್ರ ವ್ಯಕ್ತಪಡಿಸುತ್ತದೆ ಮತ್ತು ‘ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಲು ಸಂವಾದ’ಕ್ಕೆ ಕರೆ ನೀಡುತ್ತದೆ. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆಯ ಬಗ್ಗೆ ಒಂದೇ ಒಂದು ಖಂಡನೆಯ ಪದವೂ ಇಲ್ಲ. ಭಾರತದ ನಿಲುವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ಬ್ರಿಕ್ಸ್ ಪಾಲುದಾರರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾಗಿದೆ ಎಂದು ಪ್ರತಿಭಟನಾ ನಿರತರು ಆಪಾದಿಇದರು.

ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ಬಾಷುಮಿಯಾ, ಡಿ.ಎಚ್.ಕಂಬಳಿ, ಸಿಪಿಐ(ಎಂ)ನ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಂದ್ರಶೇಖರ ಗೊರಬಾಳ, ಸಿಪಿಐ(ಎಂಎಲ್) ಲಿಬರೇಶನ್‌ನ ನಾಗರಾಜ ಪೂಜಾರ್, ಜಮಾಅತೆ ಇಸ್ಲಾಮಿ ಹಿಂದ್‌ನ ಹುಸೇಬ್‌ಸಾಬ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ಬಾಬರ್‌ಪಾಷಾ ವಕೀಲರು, ಜಿಲಾನಿಸಾಬ್, ಬಸವರಾಜ ಬೆಳಗುರ್ಕಿ, ಎಂ.ಗೋಪಾಲಕೃಷ್ಣ, ಶರಣಬಣ್ಣ ನಾಗಲಾಪುರ, ಕಂಠೆಪ್ಪ, ಸಿಪಿಐ(ಎಂಎಲ್) ಮಾಸ್‌ಲೈನ್‌ನ, ಬಿ.ಎನ್.ಯರದಿಹಾಳ, ಕೃಷ್ಣಮೂರ್ತಿ ಧುಮತಿ, ಮಂಜುನಾಥ ಗಾಂಧಿನಗರ, ಶಂಕರ ಗುರಿಕಾರ ಅಬುಲೈಸ್ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಮಹಿಳಾ ಒಕ್ಕೂಟದ ವಿರುಪಮ್ಮ ಉದ್ಬಾಳ.ಜೆ, ಕಟ್ಟಡ ಕಾರ್ಮಿಕರ ಸಂಘದ ಜಗದೀಶ್ ಸುಕಾಲಪೇಟೆ, ಬಸವರಾಜ ಹಸಮಕಲ್ ಹಾಗೂ ಹಮಾಲರ ಸಂಘದ ಪದಾಧಿಕಾರಿಗಳು ಇದ್ದರು.
ಹಕ್ಕೊತ್ತಾಯಗಳು:-
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡೊರ ಹಾಗೂ ಅವರ ಪತ್ನಿ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಭೇಷರತ್ ಕ್ಷಮೆಯಾಚಿಸಿ ಈ ಕೂಡಲೇ ಅಮೆರಿಕಾ ಬಿಡುಗಡೆಗೊಳಿಸಬೇಕು, ಅಮೆರಿಕಾದ ಅಧ್ಯಕ್ಷ ಟ್ರಂಪ್, ವೆನುಜುವೆಲಾದ ಮೇಲೆ ದಾಳಿ ನಡೆಸಿ, ಆ ದೇಶದ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಅಪಹರಿಸಿ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದು, ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಿ, ವಿಶ್ವ ಸಂಸ್ಥೆಯ ಮಂಡಳಿಯಲ್ಲಿ ವಿಚಾರಣೆಗೊಳಪಡಿಸಿ ಕ್ರಮ ಜರುಗಿಸಬೇಕು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ವೆನೆಜುವೆಲಾದ ಮೇಲಿನ ಅಮೆರಿಕಾದ ದುರಾಕ್ರಮಣವನ್ನು ಖಂಡಿಸಿ, ಕ್ರಮಕ್ಕೆ ಒತ್ತಾಯಿಸಬೇಕು, ಭಾರತ ಸರ್ಕಾರದ ಮೇಲೆ ಪರೋಕ್ಷವಾಗಿ ಧಮಕಿ ಹಾಕುತ್ತಿರುವ ಮತ್ತು ದೇಶದ ಉತ್ಪನ್ನಗಳ ರಫ್ತಿನ ಮೇಲೆ ಹೆಚ್ಚಿನ ಸುಂಕ ಹೇರಿರುವ ಅಮೆರಿಕಾದ ವಿದೇಶಾಂಗ ನೀತಿಯ ವಿರುದ್ಧ ಭಾರತ ಧ್ವನಿ ಎತ್ತಬೇಕು ಮತ್ತು ಅಮೆರಿಕಾದ ಆಮದುಗಳ ಮೇಲೆ ಭಾರತ ಸುಂಕ ವಿಧಿಸಬೇಕು, ಭಾರತದೊಂದಿಗೆ ಉತ್ತಮ ವಿದೇಶಾಂಗ ಭಾಂಧವ್ಯ ಹೊಂದಿದ ಮತ್ತು ಸಹಮತ, ಸಹಬಾಳ್ವೆಯ ಮೌಲ್ಯಗಳನ್ನು ಪ್ರತಿಪಾದಿಸುವ ರಾಷ್ಟçಗಳೊಂದಿಗೆ ದೇಶ ವ್ಯಾಪಾರ-ವ್ಯವಹಾರವನ್ನು ಮಾಡಬೇಕು, ವೆನುಜುವೆಲಾದಂತಹ ಸೌರ್ವಭೌಮತ್ವ ರಾಷ್ಟçದ ಮೇಲೆ ಏಕಾಏಕಿ ದಾಳಿ ನಡೆಸಿ ಅಲ್ಲಿನ ಚುನಾಯಿತ ಸರ್ಕಾರವನ್ನು ಕಿತ್ತೊಗೆದು ಆ ದೇಶದ ತೈಲ ಸಂಪತ್ತನ್ನು ವಶಪಡಿಸಿಕೊಳ್ಳುವ ಅಮೆರಿಕಾದ ಸಂಚು ಪ್ರಜಾಪ್ರಭುತ್ವಕ್ಕೆ ಎದುರಾದ ಆಪತ್ತಾಗಿದ್ದು, ಪ್ರಜಾಸತ್ತೆಯ ರಕ್ಷಣೆಗಾಗಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಈ ವಿಷಯವನ್ನು ಭಾರತ ಖಂಡಿಸಿ, ಅಮೆರಿಕಾ ಆ ದೇಶದಲ್ಲಿ ಹಸ್ತಕ್ಷೇಪ ನಡೆಸದಂತೆ ಒತ್ತಾಯಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
