ಸಿಂಧನೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಖಾಯಂಗೊಳಿಸಿ: ಶ್ರೀಶೈಲರೆಡ್ಡಿ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 27

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಖಾಯಂಗೊಳಿಸುವAತೆ ಗುಜರಾತ್ ಹೈ ಕೋರ್ಟ್ ತೀರ್ಪುನೀಡಿದ್ದು ಕರ್ನಾಟಕದಲ್ಲಿ ಈ ತೀರ್ಪನ್ನು ಸರ್ಕಾರ ಜಾರಿಗೆ ತರಬೇಕೆಂದು ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ರೆಡ್ಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಂಧನೂರು ಮತ್ತು ತುರ್ವಿಹಾಳ ಯೋಜನೆಗಳ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿದರು. ಸರ್ಕಾರ ಗುತ್ತಿಗೆ ಪದ್ಧತಿಯ ಮೂಲಕ ವಿವಿಧ ಸಾರ್ವಜನಿಕ ವಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರು ಕಳೆದ 50 ವರ್ಷದಿಂದ ಶ್ರಮಿಸುತ್ತಿದ್ದರೂ ಅವರ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ನಿಷ್ಕಾಳಜಿ ತೋರಿದೆ ಎಂದು ಆಪಾದಿಸಿದರು.

Namma Sindhanuru Click For Breaking & Local News

ಕಾರ್ಯಕರ್ತೆಯರ ಶೋಷಣೆ: ಮುಮ್ತಾಜ್ ಆರೋಪ
ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಎಲ್ಲ ಇಲಾಖೆಗಳ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅತ್ಯಂತ ಕಠಿಣವಾದ ಕೆಲಸಗಳನ್ನು ಅವರಿಗೆ ವ್ಯವಸ್ಥಿತವಾಗಿ ಶೋಷಣೆ ಮಾಡಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ಅಂಗನವಾಡಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ಮುಮ್ತಾಜ್ ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ಕಾರ್ಯಕರ್ತರ ಸಂಕಷ್ಟಕ್ಕೆ ಸಂಘಟನೆಯೇ ಪರಿಹಾರ: ಡಿ.ಎಚ್.ಕಂಬಳಿ
ಅಂಗನವಾಡಿ ನೌಕರರ ಸಂಘಟನೆಯನ್ನು ಕಟ್ಟಲು ಬಿ.ಕೆ.ಸುಂದರೇಶ್, ಎಸ್.ಕೆ.ರಾಮಚಂದ್ರಪ್ಪ ಶಿವಣ್ಣ ಸೇರಿದಂತೆ ಹಲವಾರು ಮುಖಂಡರು ಶ್ರಮಿಸಿದ್ದಾರೆ. ಸಂಘಟನೆ ಮಾತ್ರ ಕಾರ್ಯಕರ್ತರು ಸಂಕಟಗಳಿಗೆ ಪರಿಹಾರ ನೀಡುತ್ತದೆ ಎಂದು ಅಂಗನವಾಡಿ ಫೆಡರೇಶನ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಿಎಚ್ ಕಂಬಳಿ ಅಭಿಪ್ರಾಯಪಟ್ಟರು. ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯ ಮಹಿಳೆಯರು ರಾಜಕೀಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು
ಎಐಟಿಯುಸಿ ಮುಖಂಡರಾದ ಸಂಗಯ್ಯ ಹಿರೇಮಠ, ಮಾನ್ವಿ ತಾಲೂಕು ಗೌರವಾಧ್ಯಕ್ಷ ಸಿದ್ದರಾಮಯ್ಯ, ಚೆನ್ನಮ್ಮ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಚಂದ್ರಶೇಖರ ಗೊರೆಬಾಳ, ಬಸವರಾಜ್ ಬಾದರ್ಲಿ ಮಾತನಾಡಿದರು. ಮುಖಂಡರಾದ ತಿಪ್ಪಯ್ಯಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ಆದಿಲಕ್ಷ್ಮಿ, ನಾಗರತ್ನ ತುರ್ವಿಹಾಳ, ರತ್ನಮ್ಮ ದೇವರಗುಡಿ, ಜ್ಯೋತಿ ಬಳಗಾನೂರು, ಶಾಂತಾ ಗೊರೇಬಾಳ, ನಾಗರತ್ನ ಲಿಂಗಸುಗೂರು, ಶಾವಮ್ಮ ಲಿಂಗಸುಗೂರು, ರಾಜೇಶ್, ರಾಜೇಶ್ವರಿ ಸಿರವಾರ ಮಾತನಾಡಿದರು. ಸಾವಿತ್ರಿ ಎಲೆ ಕೂಡ್ಲಿಗಿ ನಿರ್ವಹಿಸಿದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *