ಸಿಂಧನೂರು: ಮಾನ್ಯಾ ಪಾಟೀಲ್ ಮರ್ಯಾದಾಹತ್ಯೆ ದುಷ್ಕೃತ್ಯ ಖಂಡಿಸಿ ಮಾದರ (ಮಾದಿಗ) ಮಹಾಸಭಾದಿಂದ ಮನವಿ

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 26

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದ ಕಾರಣಕ್ಕೆ ಮಾನ್ಯಾ ಪಾಟೀಲ್ ಎಂಬ ಗರ್ಭಿಣಿ ಯುವತಿಯನ್ನು ತಂದೆ ಸೇರಿದಂತೆ ಕುಟುಂಬಸ್ಥರೇ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಆಗ್ರಹಿಸಿ ಮಾದರ (ಮಾದಿಗ) ಮಹಾಸಭಾದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್ ಗಿರಿಜಾಲಿ, ಮುಖಂಡರಾದ ಗುರುರಾಜ್ ಮುಕ್ಕುಂದಾ, ಅಶೋಕ್ ಮ್ಯಾಗಳಮನಿ, ವೀರೇಶ್ ಉಪ್ಪಲದೊಡ್ಡಿ, ಹಸೇನಪ್ಪ ಸೂಲಂಗಿ, ಶಿವರಾಜ್ ಉಪ್ಪಲದೊಡ್ಡಿ, ಪ್ರವೀಣ್ ದುಮತಿ, ಶಿವರಾಜ್ ಬಾಗಲವಾಡ, ಭೀಮೇಶ್ ಕವಿತಾಳ, ಮಂಜುನಾಥ್ ಸೂಲಂಗಿ, ಯಮುನಪ್ಪ ಪರಾಪುರ, ಕೊಟ್ರೇಶ್, ಶ್ರೀನಿವಾಸ್ ಶ್ರೀಪುರಂ, ಹುಸೇನಪ್ಪ ಅಶೋಕ್, ಉಮೇಶ್ ಬಾಲಿ ಇನ್ನಿತರರಿದ್ದರು.


Spread the love

Leave a Reply

Your email address will not be published. Required fields are marked *