ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 18
ಮಾನ್ವಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿ ರಚಿಸುವಂತೆ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರು ಬೆಳಗಾವಿ ಅಧಿವೇಶನದಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳುವ ಮೂಲಕ ದನಿ ಎತ್ತಿದ್ದಾರೆ.
ಬಾದರ್ಲಿ ಅವರ ಪ್ರಶ್ನೆ ಏನು ?
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಮುಆರು 2,40,000 ಮತದಾರರು ಹಾಗೂ ಅಂದಾಜು 3 ಲಕ್ಷಕ್ಕಿಂತ ಜನಸಂಖ್ಯೆಯನ್ನು ಹೊಂದಿದ್ದು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯುತ್ತಿದ್ದು, ರಾಯಚೂರು ಜಿಲ್ಲಾ ಕೇಂದ್ರದಿAದ ಸುಮಾರು 90 ಕಿ.ಮೀ ದೂರದಲ್ಲಿದ್ದು, ಜನರು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ಕಷ್ಟಕರವಾಗಿದು ಸರ್ಕಾರದ ಗಮನಕ್ಕೆ ಬಂದಿದೆಯೇ? ಮಾನ್ವಿ ಲಿಂಗಸುಗೂರು ಹಾಗೂ ಮಸ್ಕಿ ತಾಲೂಕು ಕೇಂದ್ರಗಳು ಸಿಂಧನೂರು ತಾಲೂಕು ಕೇಂದ್ರದಿಂದ ಕೇವಲ 50 ಕಿ.ಮೀ ದೂರದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ? ಹಾಗಿದ್ದಲ್ಲಿ ಮಾನ್ವಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ತಾಲೂಕು ಕೇಂದ್ರವನ್ನಾಗಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಹಾಗಿದ್ದಲ್ಲಿ ಯಾವ ಹಂತದಲ್ಲಿದೆ ಮಾಹಿತಿಯನ್ನು ಒದಗಿಸುವುದು ? ಎಂಬ ಪ್ರಶ್ನೆಗಳನ್ನು ಕಂದಾಯ ಸಚಿವರಿಗೆ ಕೇಳಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡರ ಉತ್ತರ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಸಂಬಂಧದ ಕೋರಿಕೆಗಳು ಸ್ವೀಕೃತವಾಗಿರುತ್ತವೆ. ಸದರಿ ಕೋರಿಕೆಗಳನ್ನು ಪರಿಗಣಿಸಲು ಸೂಕ್ತವಾಗಿದ್ದಲ್ಲಿ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ಇವರಿಗೆ ಪತ್ರ ಬರೆಯಲಾಗಿದ್ದು, ಸದರಿಯವರಿಂದ ಯಾವುದೇ ವರದಿ/ಪ್ರಸ್ತಾವನೆ ಸ್ವೀಕೃತಕೊಂಡಿರುವುದಿಲ್ಲ ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಪ್ರಶ್ನೆಗೆ ದಿನಾಂಕ: 17-12-2025ರಂದು ಉತ್ತರಿಸಿದ್ದಾರೆ.

