ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 16
ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶರಣಪ್ಪ ಗೋನಾಳ ಅವರು ಮಂಗಳವಾರ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಿತು. ಉಪಾಧ್ಯಕ್ಷರಾಗಿ ಯಮನಪ್ಪ ಪವಾರ, ದುರುಗೇಶ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಅಲಬನೂರು, ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿಯಾಗಿ ಚಂದ್ರಶೇಖರ ಬೆನ್ನೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 7 ಇಸಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಗುರುನಾಥ, ಉಪಾಧ್ಯಕ್ಷ ಮಹಾನಂದ, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ, ಖಜಾಂಚಿ ಮಲ್ಲಿಕಾರ್ಜುನ, ಜಿಲ್ಲಾ ಸಮಿತಿಯ ಪ್ರಸನ್ನ ಜೈನ್ ಅವರು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು, ಹಿರಿಯ ಪತ್ರಕರ್ತರಾದ ಡಿ.ಚ್.ಕಂಬಳಿ, ಪ್ರಹ್ಲಾದ ಗುಡಿ, ಶ್ಯಾಮಕುಮಾರ, ಜಿಲ್ಲಾ ಸಮಿತಿಯ ಚಂದ್ರಶೇಖರ ಯರದಿಹಾಳ, ಚನ್ನಬಸವ ಕಟ್ಟಿಮನಿ, ವೀರೇಶ ಗಡ್ಡಿಮ್ಯಾಳ, ಚಿದಾನಂದ ದೊರೆ, ದುಗ್ಗಪ್ಪ ಮಲ್ಲಾಪುರ, ಅಂಬಣ್ಣ ಸಾಸಲಮರಿ, ಕಿರಣ, ಬೀರಪ್ಪ ವಿರುಪಾಪುರ ಇನ್ನಿತರರು ಇದ್ದರು.

