ಸಿಂಧನೂರು: ಸನ್‌ರೈಸ್ ಕಾಲೇಜಿನಲ್ಲಿ ಪತ್ರಿಕಾ ವಿತರಕರ ದಿನಾಚರಣೆ, ವಿತರಕರಿಗೆ ಆತ್ಮೀಯ ಸನ್ಮಾನ

Spread the love

ನಮ್ಮ ಸಿಂಧನೂರು, ಸೆಪ್ಟೆಂಬರ್ 04
ನಗರದ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ (ಡಿ ಫಾರ್ಮಸಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್) ಕಾಲೇಜ್‌ನಲ್ಲಿ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ತ ವಿವಿಧ ದಿನಪತ್ರಿಕೆಗಳ ವಿತರಕರನ್ನು ಬುಧವಾರ ಸನ್ಮಾನಿಸಿ ಗೌರವಿಸಲಾಯಿತು. ನಗರದ ಹಿರಿಯ ಪತ್ರಿಕಾ ವಿತರಕರಾದ ಮೊಹಮ್ಮದ್ ನಜೀರ್ ಅಲಿ, ಬಸವರಾಜ್ ಬೆನ್ನೂರು, ಕೊಟ್ರಯ್ಯಸ್ವಾಮಿ ಹಿರೇಮಠ, ನಾಗಭೂಷಣ್ ಯರದಿಹಾಳ, ಎಸ್.ನಾಗರಾಜ್ ಜಾಲಿಹಾಳ, ಕುಮಾರ್ ಕಂಠಿ, ಸೋಮನಾಥ್ ಅಲಬನೂರು ಅವರನ್ನು ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಕೆ.ಅವರು ಸನ್ಮಾನಿಸಿದರು.
ಉಪನ್ಯಾಸಕ ಡಿ.ಬಸವಲಿಂಗ ಹಸಮಕಲ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ, ಪ್ಯಾರಾಮೆಡಿಕಲ್ ಪ್ರಾಚಾರ್ಯ ಚಕ್ರವರ್ತಿ, ಫಾರ್ಮಸಿ ಪ್ರಾಚಾರ್ಯ ವಾಸೀಂ ಹುಸೇನ್, ನರ್ಸಿಂಗ್ ಪ್ರಾಚಾರ್ಯ ಲಾಜರ್ ಸಿರಿಲ್, ಉಪನ್ಯಾಸಕರಾದ ಬಸವಲಿಂಗ , ಅಶುಪಾಶ, ರಾಜೇಶ್, ಜ್ಞಾನೇಶ್ವರಿ ಭವಾನಿ, ಶೋಭಾ, ಸಂತೋಷಿ, ಸಂಸ್ಥೆಯ ಇಸಾಕ್,ಮನೋಹರ್ ಬಡಿಗೇರ್ ಮೈಲಾಪುರ, ಮಹಿಬೂಬ್, ಪುಟ್ಟರಾಜ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *