ನಮ್ಮ ಸಿಂಧನೂರು, ಜುಲೈ 12
ತುಂಗಭದ್ರಾ ಜಲಾಶಯಕ್ಕೆ ದಿನಾಂಕ:12-07-2024 ಶುಕ್ರವಾರದಂದು 21,643 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 6.89 ಟಿಎಂಸಿ ನೀರು ಸಂಗ್ರಹವಿದ್ದರೆ, 17,383 ಕ್ಯೂಸೆಕ್ ನೀರು ಒಳಹರಿವಿತ್ತು, 266 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. ಗುರುವಾರಕ್ಕಿಂತಲೂ ಇಂದು 4 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವಿನ ಪ್ರಮಾಣದಲ್ಲಿ ಇಳಿಮುಖವಾಗಿದೆ. ಕಳೆದ ಹತ್ತು ವರ್ಷದ ಹಿಂದೆ ಇದೇ ದಿನ ಜಲಾಶಯದಲ್ಲಿ 32.67 ಟಿಎಂಸಿ ನೀರು ಸಂಗ್ರಹವಿದ್ದುದನ್ನು ದಾಖಲೆಗಳ ಮೂಲಕ ತಿಳಿಯಬಹುದಾಗಿದೆ.