ಸಿಂಧನೂರು: ಎಪಿಎಂಸಿ ವಾಣಿಜ್ಯ ಮಳಿಗೆಗಳು ಸಾರ್ವಜನಿಕ ಬಳಕೆಗೆ ದೊರಕುವುದು ಯಾವಾಗ ?

Spread the love

ನಮ್ಮ ಸಿಂಧನೂರು, ಜೂನ್ 20
ನಗರದ ಬಪ್ಪೂರ ರಸ್ತೆಯ ಮಾರ್ಗದಲ್ಲಿ ಎಪಿಎಂಸಿಯಿಂದ 30 ಚಿಕ್ಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಹಲವು ತಿಂಗಳುಗಳು ಕಳೆದರೂ ಇಲ್ಲಿಯವರೆಗೂ ಉದ್ಘಾಟನೆಯಾಗದಿರುವ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಮಳಿಗೆಗಳನ್ನು ನಿರ್ಮಿಸಿ ಹಲವು ದಿನಗಳೇ ಕಳೆದು ಹೋಗಿವೆ, ಆದರೆ, ಇಲ್ಲಿಯವರೆಗೂ ಉದ್ಘಾಟಿಸಿಲ್ಲ. ಯಾವ ಕಾರಣಕ್ಕೆ ಇನ್ನೂ ಈ ಮಳಿಗೆಗಳನ್ನು ಹಾಗೆಯೇ ಬಿಡಲಾಗಿದೆ. ಉದ್ಘಾಟನೆ ಮಾಡಿ ಎಪಿಎಂಸಿಯ ನಿಯಮಗಳ ಅನ್ವಯ ಅವುಗಳನ್ನು ಹಾಕಿದ್ದರೆ, ಎಪಿಎಂಸಿಗೆ ಆದಾಯವಾದರೂ ಬರುತ್ತಿತ್ತು. ಹಾಗೆಯೇ ಬಿಡುವುದರಿಂದ ಈ ವಾಣಿಜ್ಯ ಮಳಿಗೆಗಳು ಕಾಳಜಿಯ ಕೊರತೆಯಿಂದ ಪಾಳುಬೀಳಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Namma Sindhanuru Click For Breaking & Local News

‘ಸಮಸ್ಯೆ ಶೀಘ್ರ ಪರಿಹರಿಸಿ’
ಮಳಿಗೆಗಳನ್ನು ಸಾರ್ವಜನಿಕ ಉಪಯೋಗಕ್ಕೆ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳಿದ್ದರೂ ಆ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಮಳಿಗೆಗಳನ್ನು ಹರಾಜು ಹಾಕುವ ಮೂಲಕ ಜನರ ಬಳಕೆಗೆ ಒದಗಿಸಬೇಕು, ಇದರಿಂದ ಎಪಿಎಂಸಿಗೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Spread the love

Leave a Reply

Your email address will not be published. Required fields are marked *