ನಮ್ಮ ಸಿಂಧನೂರು, ಏಪ್ರಿಲ್ 20
ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಜಿನಿ ಜಿನಿ ಮಳೆ ಸುರಿಯಿತು. ತಾಲೂಕಿನ ಹಾರಾಪುರ, ಎಲೆಕೂಡ್ಲಿಗಿ, ಬಸಾಪುರ, ಕುನಟಗಿ, ಪಗಡದಿನ್ನಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮ ಹಾಗೂ ಕ್ಯಾಂಪ್ಗಳಲ್ಲಿ ಬೆಳಿಗ್ಗೆ 9 ಗಂಟೆ ಸುಮಾರು ನೆಲ ತೋಯ್ಯುವಷ್ಟು ಸಾಧಾರಣ ಮಳೆ ಸುರಿಯಿತು. ಮಧ್ಯಾಹ್ನ 12.30 ಮೋಡ ಕವಿದ ವಾತಾವರಣವಿದ್ದುದರಿಂದ ಸೂರ್ಯ ಕಂಡುಬರಲಿಲ್ಲ. ಸತತ ಬಿಸಿಲ ಧಗೆಯಿಂದ ರೋಸಿ ಹೋಗಿದ್ದ ಜನರು ತಂಪನೆ ವಾತಾವರಣ ಅನುಭವಿಸಿದರು.