ಸಿಂಧನೂರು: ಶ್ರೀ ಆದಿತ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76.92 ಫಲಿತಾಂಶ

Spread the love

ನಮ್ಮ ಸಿಂಧನೂರು, ಏಪ್ರಿಲ್ 11
ನಗರದ ಶ್ರೀ ಆದಿತ್ಯ ಸ್ವತಂತ್ರ ಪದವಿ ಪೂರ್ವ ಮತ್ತು ಪದವಿ ಕಾಲೇಜಿಗೆ 2023-24ನೇ ಶೈಕ್ಷಣಿಕ ಸಾಲಿನ ಪಿಯು ದ್ವಿತೀಯ ಪರೀಕ್ಷೆಯಲ್ಲಿ ಶೇ.76.92 ಫಲಿತಾಂಶ ದೊರೆತಿದೆ. ಪರೀಕ್ಷೆಗೆ ಹಾಜರಾದ 13 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂವರು ಅನುತ್ತೀರ್ಣರಾಗಿದ್ದಾರೆ. 1 ವಿದ್ಯಾರ್ಥಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದು, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *