ಸಿಂಧನೂರು: ಹಟ್ಟಿ ವಿರುಪಾಪುರ ರಸ್ತೆಯಲ್ಲಿ ಬಾಗಿದ್ದ ವಿದ್ಯುತ್ ಕಂಬಗಳ ಸರಿಪಡಿಸಿದ ಜೆಸ್ಕಾಂ ಸಿಬ್ಬಂದಿ, ಸಾರ್ವಜನಿಕರಿಂದ ಮೆಚ್ಚುಗೆ

Spread the love

(ಸಿಟಿ ಸುದ್ದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 25

ನಗರದ ಹಟ್ಟಿ ವಿರುಪಾಪುರ ರಸ್ತೆ ಬದಿ ಇರುವ ಜೆಸ್ಕಾಂನ ವಿದ್ಯುತ್ ಕಂಬಗಳು ಬಾಗಿದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು ಜೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು, ಈ ಹಿನ್ನೆಲೆಯಲ್ಲಿ ಸೋಮವಾರ ಜೆಸ್ಕಾಂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸುವ ಮೂಲಕ ವಿದ್ಯುತ್ ಕಂಬಗಳನ್ನು ಸರಿಪಡಿಸಿದರು.

Namma Sindhanuru Click For Breaking & Local News

ವಾರ್ಡ್ ನಂ.14ರ ಪಟೇಲ್ ಕಾಲೋನಿ, ಪಟೇಲ್ ಲೆಔಟ್ ವ್ಯಾಪ್ತಿಯ ರಸ್ತೆ ಬದಿಯಲ್ಲಿರುವ ಈ ವಿದ್ಯುತ್ ಕಂಬಗಳು ಕಳೆದ ಹಲವು ದಿನಗಳಿಂದ ಒಂದೆಡೆ ವಾಲಿದ್ದು, ಜೋರು ಗಾಳಿ ಬೀಸಿದರೆ ನೆಲಕ್ಕೆ ಬೀಳಲಿವೆ. ಈ ಮಾರ್ಗದಲ್ಲಿ ವಾಹನ ಸವಾರರು ಹಾಗೂ ಜನರು ಹೆಚ್ಚು ಸಂಚರಿಸುವುದರಿಂದ ಯಾವುದೇ ರೀತಿಯ ಅಪಾಯ ಸಾಧ್ಯತೆ ಹೆಚ್ಚಿದೆ ಎಂದು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಮೂಲಕ ತಮ್ಮ ಮನವಿಗೆ ಸಕಾಲದಲ್ಲಿ ಸ್ಪಂದಿಸಿದ್ದಾರೆ ಎಂದು ವಾ‌ರ್ಡ್‌ನ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಮ್ಮ ಸಿಂಧನೂರು ವೆಬ್ ತಾಣದಲ್ಲಿ ಮಾರ್ಚ್ 20ರಂದು ‘ಹಟ್ಟಿ ವಿರುಪಾಪುರ ರಸ್ತೆ, ಬೀಳುವ ಹಂತದಲ್ಲಿ ವಿದ್ಯುತ್ ಕಂಬಗಳು’ ಶೀರ್ಷಿಕೆಯಡಿ ಸಾರ್ವಜನಿಕರ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು.


Spread the love

Leave a Reply

Your email address will not be published. Required fields are marked *