ಸಿಂಧನೂರು: ರಸ್ತೆ ಸಂಚಾರ ತಡೆದು ಪ್ರತಿಭಟನೆ, 12 ಪಿಡಿಒ ಪರೀಕ್ಷಾರ್ಥಿಗಳ ಮೇಲೆ ಕೇಸ್ ದಾಖಲು, ಒಬ್ಬ ಪರೀಕ್ಷಾರ್ಥಿ ಬಂಧನ

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 18ನಗರದ ಸರ್ಕಾರಿ ಮಹಾವಿದ್ಯಾಲಯದ ಪಿಡಿಒ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಬೆಳಗಿನ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯ ಬಹಿಷ್ಕರಿಸಿ, ಕುಷ್ಟಗಿ-ಸಿಂಧನೂರು ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ದಿಢೀರ್ ರಸ್ತೆ ಸಂಚಾರ…

ಸಿಂಧನೂರು: ಎರಡನೇ ದಿನಕ್ಕೆ ಕಾಲಿಟ್ಟ ನಮ್ಮ ಕರ್ನಾಟಕ ಸೇನೆ ಅನಿರ್ದಿಷ್ಟಾವಧಿ ಧರಣಿ

ನಮ್ಮ ಸಿಂಧನೂರು, ನವೆಂಬರ್ 9ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಾಂಕ: 21-10-2024ರಂದು ಆರ್.ಎಚ್. ಕ್ಯಾಂಪ್-3ರ ಮಹಿಳೆ ಮೌಸಂಬಿ ಮಹೇಶ್ವರ ಮಂಡಲ್ ಹೆರಿಗೆಯ ನಂತರ ವೈದ್ಯಕೀಯ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆಂದು ಆರೋಪಿಸಿ, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಿ ಕಾನೂನು ರೀತ್ಯ ಕ್ರಮ…

ಸಿಂಧನೂರು: ಕರ್ನಾಟಕ ರಾಜ್ಯೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ…

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ನವೆಂಬರ್ 1ನಗರದ ತಹಸಿಲ್ ಕಾರ್ಯಾಲಯದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿಣ್ಣರ ಚಿಲಿಪಿಲಿ ನಾಗರಿಕರ ಕಣ್ಮನ ಸೆಳೆಯಿತು. ಒಂದೆಡೆ ನಾಡ ಹಬ್ಬದ ಸಂಭ್ರಮ, ಮತ್ತೊಂದೆಡೆ ಬೆಳಕಿನ ಹಬ್ಬದ ಉತ್ಸಾಹ ಮೇಳೈಸಿದ ವಾತಾವರಣ…

ಸಿಂಧನೂರು: ಬೆಳಕಿನ ಹಬ್ಬ ದೀಪಾವಳಿಗೆ ಮಾರುಕಟ್ಟೆಗೆ ಬಂದ ಹಣತೆಗಳು !

ಲೋಕಲ್‌ ವರದಿ : ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 26ಬೆಳಕಿನ ಹಬ್ಬ ದೀಪಾವಳಿ ಸಮೀಪಿಸಿರುವುದರಿಂದ ನಗರದ ಮಾರುಕಟ್ಟೆಗೆ ಹಣತೆಗಳು ಲಗ್ಗೆಯಿಟ್ಟಿವೆ. ಕನಕದಾಸ ಸರ್ಕಲ್ ಹಾಗೂ ಸರ್ಕಾರಿ ಆಸ್ಪತ್ರೆಯ ಬಳಿ ತಳ್ಳುಬಂಡಿಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಹಬ್ಬದ ಮುಂಚಿತವಾಗಿ ಹಣತೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ.…

ಸಿಂಧನೂರು: ಅಕ್ಕಮಹಾದೇವಿ ವಿವಿ ಪಿಜಿ ಕೇಂದ್ರದ ದಾರಿ ರಾಡಿಮಯ ! ವಿದ್ಯಾರ್ಥಿನಿಯರ ಪಡಿಪಾಟಲು !!

ಲೋಕಲ್ ನ್ಯೂಸ್: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ನಗರದ ಕುಷ್ಟಗಿ ಮಾರ್ಗದ ರಸ್ತೆಯ ಹೆಲಿಪ್ಯಾಡ್ ಸಮೀಪದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಜಯಪುರ ವ್ಯಾಪ್ತಿಗೆ ಒಳಪಡುವ ಸ್ನಾತಕೋತ್ತರ ಮಹಿಳಾ ಅಧ್ಯಯನ ಕೇಂದ್ರಕ್ಕೆ ಹೋಗುವ ಮರಂ ದಾರಿ ಮಳೆಯಿಂದಾಗಿ ರಾಡಿಮಯವಾಗಿದ್ದು, ವಿದ್ಯಾರ್ಥಿನಿಯರು…

ಸಿಂಧನೂರು/ಮಸ್ಕಿ: ಹೂ ಮುಡಿದು ನಿಂತ ತೊಗರಿ ಬೆಳೆ ?

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿನಮ್ಮ ಸಿಂಧನೂರು, ಅಕ್ಟೋಬರ್ 18ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಒಣ ಬೇಸಾಯ ಆಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕೋರೈಸುತ್ತಿದೆ. ಆರಂಭದಲ್ಲಿ ಮಳೆ ಕೊರತೆ ಎದುರಾಗಿತ್ತು, ತದನಂತರ ಬಿಟ್ಟೂ ಬಿಡದೇ ಸುರಿದ…

ಸಿಂಧನೂರು: ಹೊಳೆ-ಹಳ್ಳದ ಮರಳು ಲೂಟಿ !

ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿನಮ್ಮ ಸಿಂಧನೂರು ಸೆಪ್ಟೆಂಬರ್ 28ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ನದಿ ಹಾಗೂ ಕೆಲ ಹಳ್ಳಗಳಲ್ಲಿ ಮರಳಿಗಾಗಿ ಹಿಟಾಚಿಗಳಿಂದ ಬಗೆಯಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು,…

ಸಿಂಧನೂರು: ಹಳ್ಳದ ಸೇತುವೆಯ ಬಿರುಕು ದುರಸ್ತಿಗೆ ಒತ್ತಾಯಿಸಿ ಕರವೇ ಮನವಿ

ನಮ್ಮ ಸಿಂಧನೂರು ಸೆಪ್ಟೆಂಬರ್‌ 27ನಗರದ ರಾಯಚೂರು ಮಾರ್ಗದ ಹೆದ್ದಾರಿಯಲ್ಲಿನ ಹಳ್ಳದ ಸೇತುವೆ (ಎಲ್‌ಐಸಿ ಆಫೀಸ್ ಮುಂದಿನಿಂದ ಯಲ್ಲಮ್ಮ ದೇವಸ್ಥಾನದವರೆಗೆ)ಯ ಕೆಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿ ಕೈಗೊಳ್ಳಬೇಕು ಹಾಗೂ ತಗ್ಗು-ದಿನ್ನೆಗಳಿಂದ ಕೂಡಿದ್ದ ರಸ್ತೆಯನ್ನು ಡಾಂಬರೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ…

ಸಿಂಧನೂರು: ಶಾಸಕ ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೆಆರ್‌ಎಸ್ ಆಗ್ರಹ

ನಮ್ಮ ಸಿಂಧನೂರು, ಸೆಪ್ಟೆಂಬರ್ 16ದಲಿತ ಸಮುದಾಯದವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಕುಮ್ಮಕ್ಕು ನೀಡಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ…

ಸಿಂಧನೂರು: 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಆಗ್ರಹಿಸಿ ಪ್ರತಿಭಟನೆ

ನಮ್ಮ ಸಿಂಧನೂರು, ಆಗಸ್ಟ್ 30ಕರ್ನಾಟಕ ಲೋಕ ಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆ ಸಂಪೂರ್ಣ ಗೊಂದಲಗಳಿಂದ ಕೂಡಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಈ ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿ, ವಿದ್ಯಾರ್ಥಿ-ಯುವಜನ…