ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 6, 2026
ಆಷಾಡ ಗಾಳಿಯಲ್ಲಿ ಸೈಕಲ್ ಮೋಟರ್ ಚಲಾಯಿಸುವುದು ದ್ವಿಚಕ್ರ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ರೋಡಿಗೆ ಗಾಡಿ ಇಳಿಯುತ್ತಿದ್ದಂತೆ ಒಂದೇ ಸವನೆ ಗಾಳಿ ಒಂದೆಡೆ ತಳ್ಳುತ್ತಿದೆ. ಎದುರು ಗಾಳಿಗೆ ಸೈಕಲ್ ಮೋಟರ್‌ಗಳು ಮುಂದೆ ಹೋಗಲು ತಿನುಕುತ್ತಿವೆ, ಒಂದೊAದು ಬಾರಿ ಸವಾರರಿಗೆ ಜೋಲಿ ಹೊಡೆದ ಅನುಭವವಾಗುತ್ತಿದೆ.
ಕಣ್ಣಿಗೆ ಧೂಳು, ಗಾಡಿ ಚಲಾಯಿಸಲು ಗೋಳು !
ವಿಪರೀತ ಗಾಳಿ ಬೀಸುತ್ತಿರುವುದರಿಂದ ರಸ್ತೆ ಬದಿಯ ಮಣ್ಣು, ಧೂಳು ಸವಾರರ ಕಣ್ಣಿಗೆ ಎರಚಿದಂತಾ ಗುತ್ತಿರುವುದರಿಂದ ಗಾಡಿ ಚಲಾಯಿಸಲು ಗೋಳಾಡುವಂತಾಗಿದೆ. ಗಾಳಿಯ ನಡುವೆ ವೇಗವಾಗಿ ಗಾಡಿ ಓಡಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಸವಾರರು.
ಹೆಲ್ಮೆಟ್ ಧರಿಸಿ ಗಾಡಿ ಓಡಿಸುವುದು ಸುರಕ್ಷಿತ
“ಗಾಳಿಗೆ ಧೂಳು ಆವರಿಸುತ್ತಿರುವುದರಿಂದ ಬಹುತೇಕ ಸೈಕಲ್ ಮೋಟರ್ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು, ಏಕ್‌ದಂ ರಸ್ತೆ ಬದಿಯ ಮಣ್ಣು, ಧೂಳು ಕಣ್ಣಿಗೆ ಬೀಳುವುದರಿಂದ ಕೆಲ ಸವಾರರು ಬಿದ್ದು ಗಾಯಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ನಿಧಾನವಾಗಿ ಸೈಕಲ್ ಮೋಟರ್ ಚಲಾಯಿಸುವುದು ಬಹಳಷ್ಟು ಸುರಕ್ಷಿತ ಇಲ್ಲದೇ ಹೋದರೆ ಅಪಾಯ ಸಂಭವಿಸುವ ಸಾಧ್ಯತೆಗಳು ಜಾಸ್ತಿ” ಎಂದು ಸವಾರರೊಬ್ಬರು ಹೇಳುತ್ತಾರೆ.
