ಸಿಂಧನೂರು: ಅಂತಿಮ ಹಂತಕ್ಕೆ ತಲುಪಿದ ದಡೇಸುಗೂರು ಹೊಸ ಬ್ರಿಡ್ಜ್

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 12, 2026

ತಾಲ್ಲೂಕಿನ ದಡೇಸುಗೂರು ಬಳಿಯ ತುಂಗಭದ್ರಾ ನದಿಗೆ ಕಳೆದ ಹಲವು ದಿನಗಳಿಂದ ನಿರ್ಮಿಸಲಾಗುತ್ತಿರುವ ಬೃಹತ್ತಾದ ಹೊಸ ಬ್ರಿಡ್ಜ್ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಈಗಾಗಲೇ ಇರುವ ಹಳೆಯ ಬ್ರಿಡ್ಜ್ ಶಿಥಿಲಗೊಂಡಿದ್ದು, ಸರಕು ಸಾಗಣೆ ವಾಹನಗಳು ಸೇರಿದಂತೆ ಸಾರಿಗೆ ಬಸ್‌ಗಳು ಸುಗಮವಾಗಿ ಸಾಗಲು ಅನನುಕೂಲ ಪರಿಸ್ಥಿತಿ ಇದೆ. ಹೀಗಾಗಿ ಹೊಸ ಬ್ರಿಡ್ಜ್ ಪೂರ್ಣಗೊಳಿಸುವ ಕಾರ್ಯ ಭರದಿಂದ ಸಾಗಿದೆ.

Namma Sindhanuru Click For Breaking & Local News

ಹಳೆಯ ಬ್ರಿಡ್ಜ್ ಶಿಥಿಲ
ಕಳೆದ ನಾಲ್ಕೆöÊದು ದಶಕಗಳ ಹಿಂದೆ ದಡೇಸುಗೂರು ಬಳಿಯಿರುವ ತುಂಗಭದ್ರಾ ನದಿಗೆ ನಿರ್ಮಿಸಿದ ಹಳೆಯ ಬ್ರಿಡ್ಜ್ ಶಿಥಿಲಗೊಂಡಿದೆ. ಈ ಸೇತುವೆಯ ಮೇಲೆ ಭಾರಿ ವಾಹನಗಳನ್ನು ಚಲಾಯಿಸಲು ಚಾಲಕರು ಪ್ರಯಾಸಪಡುತ್ತಿದ್ದು, ಹೀಗಾಗಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು.
ಮಳೆಗಾಲದೊಳಗೆ ಮುಗಿಯುವ ಸಾಧ್ಯತೆ ?
“ಬಹುತೇಕ ಕೆಲಸ ಕಾರ್ಯಗಳು ಮುಗಿದಿವೆ. ಇನ್ನೂ ಕೆಲ ಸಣ್ಣಪುಟ್ಟ ಮೈನರ್ ವರ್ಕ್ಗಳು ಇವೆ. ಈ ಮಳೆಗಾಲದೊಳಗೆ ಆದಷ್ಟು ಬೇಗ ಸೇತುವೆ ಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಲಸ ಭರದಿಂದ ಸಾಗಿದೆ.” ಎಂದು ಕಾರ್ಮಿಕರೊಬ್ಬರು ಹೇಳುತ್ತಾರೆ. ಹೊಸ ಬ್ರಿಡ್ಜ್ ಸಾರ್ವಜನಿಕರ ಬಳಕೆ ಮುಕ್ತವಾದರೆ ಹಳೆಯ ಸೇತುವೆಯ ಮೇಲಿನ ಓಡಾಡಕ್ಕೆ ಬ್ರೇಕ್ ಬೀಳಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *