ಸಿಂಧನೂರು : ತಾಂತ್ರಿಕ ಸಮಸ್ಯೆ, ನಗರಸಭೆಯಲ್ಲಿ ಹಳೆ, ಹೊಸ ಪಾರ್ಮ್ ನಂ.3 ಪಡೆಯಲೂ ಪೀಕಲಾಟ !!

Spread the love

ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ಸಿಂಧನೂರು, ಮಾರ್ಚ್ 14

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಹಳೆ ಮತ್ತು ಹೊಸ ಫಾರಂ.3 ಪಡೆಯಲು ನಾಗರಿಕರು ಪೀಕಲಾಟ ಎದುರಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತಿದ್ದ ಫಾರಂ ನಂ.3 ಪ್ರತಿ ಕಳೆದ ಹಲವು ದಿನಗಳಿಂದ ದೊರೆಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಿರಿಕಿರಿ ಅನುಭವಿಸುತ್ತಿದ್ದಾರೆ.
“ಕಳೆದ ನವೆಂಬರ್‌ನಿಂದಲೇ ಈ ಸಮಸ್ಯೆ ಇದೆ. ಒಂದೊಂದು ಸಲ ಬರುತ್ತೆ, ಒಂದೊಂದು ಸಲ ಕೈಕೊಡುತ್ತೆ. ನಮ್ಮ ಬಳಿ ಏನಿಲ್ಲ. ಇಡೀ ರಾಜ್ಯದಾದ್ಯಂತ ಇದೇ ಪರಿಸ್ಥಿತಿ ಇದೆ. ವೆಬ್‌ಸೈಟ್ ಅಪ್‌ಡೇಟ್ ಮಾಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಹಾಗಾಗಿ ನಾವೇನು ಮಾಡಲು ಬರುವುದಿಲ್ಲ. ಲಾಗಿನ್‌ನಲ್ಲಿ ಪ್ರಯತ್ನಿಸಿ ನೋಡುತ್ತೇವೆ. ಇಲ್ಲದೇ ಹೋದರೆ ಹಳೆ ವರ್ಷದ ಫಾರ್ಮ್ ನಂ.3ಯನ್ನೇ ನಡೆಸಿ ಎಂದು ನಗರಸಭೆಯ ಸಿಬ್ಬಂದಿ ಜಾರಿಕೆ ಉತ್ತರ ನೀಡುತ್ತಾರೆ” ನಗರವೊಂದರ ಲೇಔಟ್‌ನಲ್ಲಿ ನಿವೇಶನವೊಂದಿರುವ ಮಾಲೀಕರೊಬ್ಬರು ಹೇಳುತ್ತಾರೆ.
ಕೆಲಸ ಕಾರ್ಯಗಳಿಗೆ ಅಡಚಣೆ
“ಪ್ರಸ್ತುತ ಪಾರಂ.3 ಹಾಗೂ ಹಳೆಯ ಫಾರಂ 3 ನಮೂನೆ ಪಡೆಯಲು ಆನ್‌ಲೈನ್ ಸಮಸ್ಯೆ ಉಂಟಾಗಿರುವುದರಿAದ ಬ್ಯಾಂಕ್ ಕೆಲಸ ಸೇರಿದಂತೆ ಕೊಡು-ಕೊಳ್ಳುವ ವ್ಯವಹಾರಗಳಿಗೆ ತೊಂದರೆಯಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದು, ತಾಂತ್ರಿಕ ಸಮಸ್ಯೆಯನ್ನು ಆದಷ್ಟು ಶೀಘ್ರ ಪರಿಹರಿಸುವ ಮೂಲಕ ಈ ಹಿಂದಿನಂತೆ ಸುಲಭವಾಗಿ ಫಾರಂ ನಂ.3ರ ಪ್ರತಿ ದೊರಕುವಂತೆ ಮಾಡಬೇಕು” ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *