ಸಿಂಧನೂರು: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ದಾಳಿ ಖಂಡಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 2

ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ಸಾಮ್ರಾಜ್ಯವಾದಿ ಶಿಬಿರ ನಡೆಸುತ್ತಿರುವ ಮಿಲಟರಿ ದಾಳಿ, ಪ್ರಚೋದನೆ ಮತ್ತು ದೇಶದ ಸಾರ್ವಭೌಮತ್ವ ಅಸ್ಥಿರಗೊಳಿಸುವ ಕಾರ್ಯಾಚರಣೆ ಹಾಗೂ ಇರಾನ್ ನಾಯಕ ಅಯಾತೊಲ್ಲಾ ಅಲಿ ಖೈಮನಿ ಅವರ ಹತ್ಯೆ ಖಂಡಿಸಿ, ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನಿಂದ ನಗರದ ಗಾಂಧಿಸರ್ಕಲ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಐ (ಎಂಎಲ್) ರೆಡ್‌ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗAಗಾಧರ ಮಾತನಾಡಿ, ಇದು ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ. ಇದು ಒಂದು ಸ್ವತಂತ್ರ ರಾಷ್ಟ್ರದ ಸ್ವಾಯತ್ತತೆಯ ಮೇಲಿನ ನೇರ ಸಾಮ್ರಾಜ್ಯವಾದಿ ಆಕ್ರಮಣವಾಗಿದೆ. ತನ್ನ ಮಾತಿಗೆ ಬಗ್ಗದ, ತನ್ನ ಶೋಷಣೆಗೆ ಶರಣಾಗದ ರಾಷ್ಟ್ರಗಳನ್ನು ನಾಶಗೊಳಿಸಲು ಅಮೇರಿಕಾ ನೇತೃತ್ವದ ಸಾಮ್ರಾಜ್ಯವಾದ ಯುದ್ಧ, ಆರ್ಥಿಕ ನಿಷೇಧ, ಅಸ್ಥಿರತೆ ಮತ್ತು ರಾಜಕೀಯ ಹತ್ಯೆಗಳನ್ನು ತನ್ನ ನಿಯಮಿತ ಉಪಕರಣಗಳಾಗಿಸಿಕೊಂಡಿದೆ. ಖೈಮನಿ ಅವರ ಹತ್ಯೆ ಈ ಜನವಿರೋಧಿ ಯಂತ್ರದ ಮತ್ತೊಂದು ಕ್ರೂರ ಕೊಂಡಿಯಾಗಿದೆ. ಬಂಡವಾಳವಾದ ತನ್ನ ಸಂಕಷ್ಟಗಳನ್ನು ಬಗೆಹರಿಸಲು ಹಿಂಸೆಯ ದಾರಿಯನ್ನೇ ಆರಿಸುತ್ತದೆ. ಇಂದಿನ ಅಮೇರಿಕಾ ಸಾಮ್ರಾಜ್ಯವಾದ ಆ ಹಿಂಸೆಯ ಅತ್ಯಂತ ಕ್ರೂರ ರೂಪವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ವಿಯೆಟ್ನಾಂನಿAದ ಇರಾಕ್‌ವರೆಗೆ, ಅಫ್ಘಾನಿಸ್ತಾನದಿಂದ ಪ್ಯಾಲೆಸ್ತೀನ್‌ವರೆಗೆ ಎಲ್ಲೆಡೆ ಬಿಟ್ಟಿರುವುದು ಜನನಾಶ ಮತ್ತು ಅರಾಜಕತೆ ಮಾತ್ರ. ಇರಾನ್ ಮೇಲಿನ ಯುದ್ಧ ದಾಳಿ ಮತ್ತು ಖೈಮನಿ ಅವರ ಹತ್ಯೆ ಕೂಡ ಅದೇ ರಕ್ತಪಾತದ ರಾಜಕಾರಣದ ಭಾಗ. ಇಸ್ರೇಲ್ ಎಂಬ ಜಿಯೊನಿಸ್ಟ್ ರಾಜ್ಯ ಅಮೇರಿಕಾ ಸಾಮ್ರಾಜ್ಯವಾದದ ಮುಂಚೂಣಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ಯಾಲೆಸ್ತೀನಿನ ಜನರ ಮೇಲೆ ನಡೆಸುತ್ತಿರುವ ನಿರಂತರ ಜನಾಂಗ ಹತ್ಯೆಯಂತೆಯೇ, ಈಗ ಇರಾನ್ ವಿರುದ್ಧವೂ ಯುದ್ಧ ಮತ್ತು ರಾಜಕೀಯ ಹತ್ಯೆಯ ದಾರಿಯನ್ನು ಅಳವಡಿಸಿಕೊಂಡಿದೆ. ಇದು ಅಂತರರಾಷ್ಟ್ರೀಯ ಕಾನೂನುಗಳಿಗೆ ಮಾತ್ರವಲ್ಲ, ಮಾನವೀಯತೆಯ ಅಸ್ತಿತ್ವಕ್ಕೇ ಸವಾಲಾಗಿದೆ. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿ ಮೋದಿ ವಹಿಸುತ್ತಿರುವ ಮೌನ ಅಥವಾ ಪರೋಕ್ಷ ಬೆಂಬಲ ಅತ್ಯಂತ ಜನವಿರೋಧಿ ಮತ್ತು ಲಜ್ಜಾಸ್ಪದ. ಇದು ದೇಶವನ್ನು ಸಾಮ್ರಾಜ್ಯವಾದಿ ಯುದ್ಧ ಶಿಬಿರದ ಭಾಗವಾಗಿಸುವ ಅಪಾಯಕಾರಿ ಪ್ರವೃತ್ತಿಯಾಗಿದೆ. ಇಂದು ಇರಾನ್—ನಾಳೆ ಇನ್ನೊಂದು ದೇಶ.ಇಂದು ರಾಜಕೀಯ ಹತ್ಯೆ, ನಾಳೆ ಸಂಪೂರ್ಣ ಯುದ್ಧ. ಆದ್ದರಿಂದ ವಿಶ್ವದ ಕಾರ್ಮಿಕ ವರ್ಗ, ಕಮ್ಯುನಿಸ್ಟ್ ಶಕ್ತಿಗಳು ಮತ್ತು ಎಲ್ಲಾ ಪ್ರಗತಿಪರ ಜನತೆ ಸಾಮ್ರಾಜ್ಯವಾದಿ ಯುದ್ಧ ಮತ್ತು ರಾಜಕೀಯ ಹತ್ಯೆಗಳಿಗೆ ವಿರುದ್ಧವಾಗಿ ಏಕತೆಯಿಂದ ಎದ್ದು ನಿಲ್ಲಬೇಕು. ಸಾಮ್ರಾಜ್ಯವಾದವನ್ನು ಸೋಲಿಸುವುದೇ ಶಾಂತಿಯ ಏಕೈಕ ಮಾರ್ಗ” ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ, ದಲಿತ ವಿದ್ಯಾರ್ಥಿ ಪರಿಷತ್(ಡಿವಿಪಿ)ನ ನರಸಪ್ಪ ಬಡಿಗೇರ್, ದುರುಗೇಶ ಕಲಮಂಗಿ, ಶಿವುಪುತ್ರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ಸಿಪಿಐಎಂಎಲ್‌ನ ಹೆಚ್ ಆರ್ ಹೊಸಮನಿ, ಮುದಿಯಪ್ಪ ಹೆಚ್ ಎನ್ ಕ್ಯಾಂಪ್, ಧರಗಯ್ಯ, ಸಂಗಪ್ಪ, ಹುಲುಗಪ್ಪ ಬಳ್ಳಾರಿ, ಎಂ. ನಿರಂಜನಕುಮಾರ್, ಎಂ. ಎಸ್ ರಾಜಶೇಖರ್, ಬಾಲಪ್ಪ, ಕರಿಯಮ್ಮ ವಿರುಪಾಪುರ, ರಂಗಮ್ಮ, ಶರಣಮ್ಮ, ದೇವಕೇಮ್ಮ, ಆಂಜನೇಯ್ಯ ಸೇರಿದಂತೆ ಇತರರು ಇದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *