ನಮ್ಮ ಸಿಂಧನೂರು, ಜನವರಿ 16
ಕ್ರಾಂತಿಕಾರಿ ಹೋರಾಟಗಾರ್ತಿ ಹುತಾತ್ಮ ಹಾಜಿಮಾ ಆಯನೂರು ಹಾಗೂ ಹಾಜಿಸಾಬ್ ಆಯನೂರು ಇವರ ತಾಯಿಯವರಾದ ಹಸನಮ್ಮ (85) ಅವರು ಶುಕ್ರವಾರ ಬೆಳಗಿನ ಜಾವ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದು, ಒಬ್ಬ ಪುತ್ರಿ ಮೃತರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಆಯನೂರಿನಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಕುಟುಂಬದವರು, ಹೋರಾಟದ ಒಡನಾಡಿಗಳು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
