ಸಿಂಧನೂರು: ಎಂಎಸ್‌ಪಿ ಅಡಿ ಬಿಳಿ ಜೋಳ ಖರೀದಿ ನೋಂದಣಿ ಪ್ರಕ್ರಿಯೆ ಆರಂಭ, ಜಿಲ್ಲಾಧಿಕಾರಿಗಳ ಆದೇಶ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 14

2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ದಿನಾಂಕ: 14-01-2026ರಿಂದ ಆರಂಭಗೊAಡಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ(ಆಹಾರ 1&2), ಆಹಾರ ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ, ಬೆಂಗಳೂರು ರವರು ದಿನಾಂಕ: 09-01-2026ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆದೇಶಿಸಿದ ಹಿನ್ನೆಲೆಯಲ್ಲಿ, ದಿನಾಂಕ: 13-01-2026ರಂದು ರಾಯಚೂರು ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳಿಗೆ ಆದೇಶ ಹೊರಡಿಸಿದ್ದಾರೆ.
ಆದೇಶದ ಸಾರಾಂಶ:
“2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳವನ್ನು ಖರೀದಿಗೆ ಸಂಬAಧಿಸಿದAತೆ, ಈಗಾಗಲೇ ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ತಾಲ್ಲೂಕುವಾರು ಖರೀದಿ ಕೇಂದ್ರಗಳ(ಸರ್ಕಾರದಿAದ ಅನುಮೋದಿಸಲ್ಪಟ್ಟ) ಪಟ್ಟಿಯನ್ನು ಈ ಪತ್ರದೊಂದಿಗೆ ಅಡಕಗೊಳಿಸಿದೆ. ಪ್ರಯುಕ್ತ ಮುಂಗಾರು ಋತುವಿನಲ್ಲಿ ಬಿಳಿಜೋಳವನ್ನು ಬೆಳೆದಿರುವ ಆಸಕ್ತ ರೈತರು ಸದರಿ ಯೋಜನೆಯಡಿ ಸದರಿ ಬೆಳೆಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಜೋಳವನ್ನು ಹತ್ತಿರದ ಖರೀದಿ ಕೇಂದ್ರಗಳಲ್ಲಿ Frutis ID ಯೊಂದಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಮುಂದುವರೆದು ಉಲ್ಲೇಖಿತದನ್ವಯ ರಾಜ್ಯದಾದ್ಯಂತ ಒಟ್ಟು 3.00 ಲಕ್ಷ ಮೆ.ಟನ್ ಜೋಳದ ಗುರಿಯನ್ನು ನಿಗದಿಪಡಿಸಲಾಗಿದ್ದು, ಅದರಲ್ಲಿ ಮುಂಗಾರು ಋತುವಿನಲ್ಲಿ 0.88 ಲಕ್ಷ ಮೆಟ್ರಿಕ್ ಟನ್ & ಹಿಂಗಾರು ಋತುವಿನಲ್ಲಿ 2.12 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸಲು ಮಿತಿಯನ್ನು ನಿಗಧಿಪಡಿಸಲಾಗಿರುತ್ತದೆ. ಅಲ್ಲದೇ ಒಬ್ಬ ರೈತನು ಯಾವುದಾದರು ಒಂದು ಋತುವಿನಲ್ಲಿ ಮಾತ್ರ ಸದರಿ ಯೋಜನೆಯಡಿ ಜೋಳವನ್ನು ನೋಂದಣಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದ್ದು, ನಾಳೆ ಅಂದರೆ ದಿನಾಂಕ: 14.01.2026 ರಿಂದ ರೈತರಿಂದ ನೋಂದಣಿ ಪ್ರಾರಂಭಗೊಳ್ಳುತ್ತಿರುವುದರಿಂದ ಈ ಬಗ್ಗೆ ತಮ್ಮ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ರೈತರಿಗೆ ಮಾಹಿತಿ ನೀಡಲು ಹಾಗೂ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸುಗುಮವಾಗಿ ಕೈಗೊಳ್ಳಲು ಸೂಚಿಸಿದೆ” ಎಂದು ಆದೇಶದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *