ಗಂಗಾವತಿ: ಶ್ರೀಮತಿ ಎ.ಕೆ.ಆರ್‌.ಡಿ. ಸ್ಮಾರಕ ಕಾಲೇಜು ಆಡಳಿತಾಧಿಕಾರಿ ಬಸವರಾಜ.ಬಿ ಗೆ ಸನ್ಮಾನ

Spread the love

ನಮ್ಮ ಸಿಂಧನೂರು, ಡಿಸೆಂಬರ್ 28
ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಕರ್ನಾಟಕ ಹಾಗೂ ಪರ್ಯಾವರಣ ಟ್ರಸ್ಟ್ (ರಿ) ಶಿವಮೊಗ್ಗದ ವತಿಯಿಂದ ಹಮ್ಮಿಕೊಂಡಿರುವ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀಮತಿ ಎ.ಕೆ.ಆರ್.ದೇವಿ ಸ್ಮಾರಕ ಪದವಿ ಪೂರ್ವ ಕಾಲೇಜ್ (ವಿಜ್ಞಾನ & ವಾಣಿಜ್ಯ) ವಿದ್ಯಾರ್ಥಿಗಳು ಬೃಹತ್ ಜಾಥಾದಲ್ಲಿ ಭಾಗವಹಿಸಿ ಜನಜಾಗೃತಿ ಮೂಡಿಸಿದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯಾದ ಬಸವರಾಜ.ಬಿ ಅವರನ್ನು ಜಾಥಾದಲ್ಲಿ ಭಾಗವಹಿಸಿದ್ದ ಶ್ರೀಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


Spread the love

Leave a Reply

Your email address will not be published. Required fields are marked *