ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 22
ನಗರದ ಟೌನ್ ಹಾಲ್‌ನಲ್ಲಿ ದಿನಾಂಕ: 23-12-2025 ಮಂಗಳವಾರದಂದು ಬೆಳಿಗ್ಗೆ: 10-30ಕ್ಕೆ ನಿರ್ಮಲ ತುಂಗಾಭದ್ರಾ ಅಭಿಯಾನ ಸಮಿತಿಯ ಹಾಗೂ ಸಿಂಧನೂರು ಜಿಲ್ಲಾ ಘೋಷಣೆ ಪ್ರಸ್ತಾವನೆ ಕುರಿತು ಸರ್ವಪಕ್ಷದ ಮುಖಂಡರುಗಳು ಹಾಗೂ ಎಲ್ಲಾ ಸಂಘ-ಸಂಸ್ಥೆಯ ಪದಾಧಿಕಾರಿಗಳ ಸಭೆ ಕರೆಯಲಾಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಅವರು, ಈ ಸಭೆಯಲ್ಲಿ ಹಾಜರಾಗಿ ಸಲಹೆ, ಸೂಚನೆಗಳನ್ನು ನೀಡಲು ಕೋರಿದ್ದಾರೆ.

