ಸಿಂಧನೂರು: ತುಂಗಭದ್ರಾ ಡ್ಯಾಂನಲ್ಲಿ 27.33 ಟಿಎಂಸಿ ನೀರು ಸಂಗ್ರಹ

Spread the love

ನಮ್ಮ ಸಿಂಧನೂರು, ಜುಲೈ 11
ತುಂಗಭದ್ರಾ ಜಲಾಶಯದಲ್ಲಿ 27.33 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ಐದಾರು ದಿನಗಳಿಂದ ಒಳಹರಿವಿನಲ್ಲಿ ಇಳಿಮುಖವಾಗಿದೆ. ಜಲಾಶಯಕ್ಕೆ ದಿನಾಂಕ:11-07-2024 ಗುರುವಾರದಂದು 25,349 ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. 205 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 5.42 ಟಿಎಂಸಿ ನೀರು ಸಂಗ್ರಹವಿದ್ದರೆ, 17,761 ಕ್ಯೂಸೆಕ್ ನೀರು ಒಳಹರಿವಿತ್ತು, 265 ಕ್ಯೂಸೆಕ್ ನೀರು ಹೊರಗೆ ಹರಿಬಿಡಲಾಗಿತ್ತು. 50 ಸಾವಿರ ಕ್ಯೂಸೆಕ್‌ವರೆಗೆ ದಾಖಲಾಗಿದ್ದ ಒಳಹರಿವು ಇಂದು 25,349 ಕ್ಯೂಸೆಕ್‌ಗೆ ತಲುಪಿದ್ದು, ಶಿವಮೊಗ್ಗ ಹಾಗೂ ನದಿ ಮೂಲದಲ್ಲಿ ಮಳೆಯ ಪ್ರಮಾಣ ಹೆಚ್ಚಿದಂತೆ, ಒಳಹರಿವು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.


Spread the love

Leave a Reply

Your email address will not be published. Required fields are marked *