ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 18
ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ 3 ಗ್ರಾಮ ಪಂಚಾಯಿತಿಯ 11 ಗ್ರಾಮಗಳು ಹಾಗೂ ಗುಂಜಳ್ಳಿ ಹೋಬಳಿಯ 3 ಗ್ರಾಮ ಪಂಚಾಯಿತಿಯ 8 ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲಿಯೇ ಯಥಾಸ್ಥಿತಿ ಉಳಿಸುವಂತೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
“ಸದರಿ ಹೋಬಳಿಯ ಜನರು ನನ್ನ ಕಚೇರಿಗೆ ಬಂದು ಮಸ್ಕಿ ತಾಲೂಕಿಗೆ ಸೇರಿಸುವ ಕುರಿತು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಇದರ ವಿರುದ್ಧವಾಗಿ ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಕಾರಣ ಸದರಿ ಪ್ರಸ್ತಾವನೆಯನ್ನು ಕೈಬಿಟ್ಟು ಯಥಾಸ್ಥಿತಿ ಉಳಿಸಿಕೊಳ್ಳಬೇಕು ಹಾಗೂ ಸಿಂಧನೂರನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಪ್ರಸ್ತಾವನೆಯಿದೆ. ಇಂತಹ ಸಂದÀರ್ಭದಲ್ಲಿ ಸಿಂಧನೂರು ತಾಲೂಕಿನ ಹಳ್ಳಿಗಳನ್ನು ವಿಭಜನೆ ಮಾಡುವುದು ಸರಿಯಲ್ಲ. ಕಾರಣ ಸದರಿ ಪ್ರಸ್ತಾವನೆಯನ್ನು ಕೈಬಿಡಲು ಈ ಮೂಲಕ ಕೋರುತ್ತೇನೆ” ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
