ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 15
ನಗರದ ರಾಯಚೂರು ಮಾರ್ಗದ ಹೆದ್ದಾರಿಯಲ್ಲಿ ಜೂನಿಯರ್ ಕಾಲೇಜು ಬಳಿ ಲಾರಿಯೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ. ರಾಯಚೂರು ಮಾರ್ಗದಿಂದ ಗಂಗಾವತಿ ಮಾರ್ಗವಾಗಿ ಲಾರಿ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಅವಘಡದಲ್ಲಿ ಲಾರಿಯ ಮುಂಬದಿ ಸಂಪೂರ್ಣ ಜಖಂಗೊAಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆದ್ದಾರಿಯಲ್ಲಿ ಅಲ್ಲಲ್ಲಿ ಮಳೆಯಿಂದಾಗಿ ಡಾಂಬರ್ ಕಿತ್ತು ಹೋಗಿರುವುದು, ಅಲ್ಲದೇ ಹಂಪ್ಸ್ಗಳಲ್ಲಿ ಕಂದಕ ಉಂಟಾಗಿರುವುದು ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಚಾಲಕರು ತಿಳಿಸಿದ್ದಾರೆ.