ನಮ್ಮ ಸಿಂಧನೂರು, ಸೆಪ್ಟೆಂಬರ್ 06
ನಗರದ ಬಸವ ಸರ್ಕಲ್ ಬಳಿಯಿರುವ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 8 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಅಕ್ಷರ ಸಂಗಾತ ಸಾಹಿತ್ಯ ಮಾಸ ಪತ್ರಿಕೆಯ ಅವಲೋಕನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಎಚ್.ಕಂಬಳಿ ಉದ್ಘಾಟಿಸುವರು. ಕವಿ ಆರಿಫ್ ರಾಜಾ ಅವರು ಅಕ್ಷರ ಸಂಗಾತದ ಒಡನಾಟದ ಕುರಿತು ಮಾತನಾಡುವರು. ಮಾಸ ಪತ್ರಿಕೆಯ ಸಂಪಾದಕರಾದ ಟಿ.ಎಸ್.ಗೊರವರ ಉಪಸ್ಥಿತರಿರುವರು. ಅಮರೇಶ ಗಿಣಿವಾರ, ದೊಡ್ಡ ಹನುಮಂತ ಜವಳಗೇರಾ, ಈಶ್ವರ ಹಲಗಿ, ಭೀಮೇಶ ಯರಡೋಣಿ, ಬಸವರಾಜ ಹಳ್ಳಿ, ಚಂದ್ರಶೇಖರ ಬೆನ್ನೂರು, ಅಬ್ದುಲ್ ಸಮ್ಮದ್ ಚೌದ್ರಿ, ಆಂಜನೇಯ, ಶಾಮೀದ್ ಲಾಲ ಅಹ್ಮದ್‌ಸಾಬ್, ಶರೀಫ್ ಹಸಮಕಲ್, ಕೊಟ್ರೇಶ್.ಬಿ, ಬಸವರಾಜ ಕುಂಬಾರ, ಶಂಕರ ದೇವರು ಹಿರೇಮಠ, ಚಂದ್ರಶೇಖರ ಗೊರಬಾಳ ಸೇರಿದಂತೆ ಸಾಹಿತಿಗಳು ಅವಲೋಕನದಲ್ಲಿ ಭಾಗವಹಿಸಲಿದ್ದಾರೆ.
ಮನುಜಮತ ಬಳಗ, ಪಿ.ಲಂಕೇಶ್ ಸಾಹಿತ್ಯ ಬಳಗ, ದಲಿತ ಸಾಹಿತ್ಯ ಪರಿಷತ್ತು, ಸಮುದಾಯ, ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ದಲಿತ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.