ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 21
ನಗರದ ರಾಯಚೂರು-ಗಂಗಾವತಿ ಮಾರ್ಗದ ಶಹರ ಪೊಲೀಸ್ ಠಾಣೆಯ ಮುಂದಿನ ರಸ್ತೆಯ ಎರಡೂ ಬದಿಯಲ್ಲಿ ಅಳವಡಿಸಿರುವ ನೆಲಹಾಸು ಸಿಮೆಂಟ್ ಬ್ರಿಕ್ಸ್ಗಳು ಪುಡಿಪುಡಿಯಾಗಿ ತೆಗ್ಗುಗಳು ಬಿದ್ದಿದ್ದು ಆಕ್ಸಿಡೆಂಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಈ ಮಾರ್ಗದಲ್ಲಿ ಮೋಟರ್ ಸೈಕಲ್ ಸವಾರರು ಸೇರಿ ಇತರೆ ವಾಹನ ಸವಾರರು ಭಯದಿಂದ ಚಲಾಯಿಸುವಂತಾಗಿದೆ. ಆದರೆ ಸಂಬಂಧಿಸಿದ ಇಲಾಖೆಯವರು ಮಾತ್ರ ಕಿಂಚಿತ್ತೂ ಈ ಕಡೆ ತಿರುಗಿ ನೋಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪಘಾತಕ್ಕೆ ಕಾರಣವಾಗುವ ಇಲಾಖೆಯವರಿಗೆ ಯಾರು ದಂಡ ಹಾಕುತ್ತಾರೆ ? ಪ್ರಶ್ನೆ
ಹೆಲ್ಮೆಟ್ ಇಲ್ಲದವರಿಗೆ, ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದವರಿಗೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ಕಳೆದ ಹಲವು ದಿನಗಳಿಂದ ರಸ್ತೆ ಕಿತ್ತುಹೋಗಿ ತೆಗ್ಗುಗಳು ಬಿದ್ದು, ವಾಹನ ಸವಾರರ ಅಪಘಾತಕ್ಕೆ ಕಾರಣವಾಗುತ್ತಿದ್ದು, ಇದಕ್ಕೆ ಕಾರಣರಾದ ಇಲಾಖೆಯವರಿಗೆ ಯಾರು ದಂಡ ಹಾಕುತ್ತಾರೆ ಎಂದು ಸಂಘಟನೆಯ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

ಹೆದ್ದಾರಿಯಲ್ಲಿ ತಗ್ಗು-ದಿನ್ನೆಗಳು
“ರಸ್ತೆ ಅತಿಕ್ರಮಣದಿಂದ ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚಾಗಿವೆ ಸೇರಿದಂತೆ ನಾನಾ ಕಾರಣಗಳನ್ನೊಡ್ಡಿ, ತಾಲೂಕು ಆಡಳಿತ ಸೇರಿ ವಿವಿಧ ಇಲಾಖೆಗಳು ಸೇರಿಕೊಂಡು ಬೀದಿ ಬದಿ ವ್ಯಾಪಾರಸ್ಥರ ಡಬ್ಬಾಗಳನ್ನು ತೆರವುಗೊಳಿಸಿದ್ದಾರೆ. ಎನ್‌ಎಚ್‌ಎಐನವರ ವ್ಯಾಪ್ತಿಗೆ ಬರುವ 150ಎ ಹೆದ್ದಾರಿಯಲ್ಲಿ ಬಹಳಷ್ಟು ಕಡೆ ತಗ್ಗು-ದಿನ್ನೆಗಳು ಬಿದ್ದು ದಿನವೂ ಅಪಘಾತಕ್ಕೆ ಕಾರಣವಾಗುತ್ತಿದ್ದರೂ ಈ ಇಲಾಖೆಯ ಅಧಿಕಾರಿಗಳ ಮೇಲೆ ತಾಲೂಕು, ಜಿಲ್ಲಾಡಳಿತ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿದೆ. ಜನಸಾಮಾನ್ಯರಿಗೆ ಒಂದು ಕಾನೂನು ಇಲಾಖೆಯ ಅಧಿಕಾರಿಗಳಿಗೆ ಇನ್ನೊಂದು ಕಾನೂನು ಇದೆಯೇ ? ಎಂದು ಎಂದು ಬೀದಿ ಬದಿ ವ್ಯಾಪಾರಸ್ಥರು ಆರೋಪಿಸುತ್ತಾರೆ.

ಕನಕದಾಸ ಸರ್ಕಲ್, ಜೂನಿಯರ್ ಕಾಲೇಜು ಬಳಿ
ಕನಕದಾಸ ಸರ್ಕಲ್, ಪಿಡಬ್ಲ್ಯುಡಿ ಕ್ಯಾಂಪ್‌ನ ಜೂನಿಯರ್ ಕಾಲೇಜು ಬಳಿಯಿರುವ ಹಂಪ್ಸ್ ಹೀಗೆ ಈ ಮಾರ್ಗದಲ್ಲಿ ನಾಲ್ಕಾರು ಕಡೆ ತಗ್ಗು-ದಿನ್ನೆಗಳು ಬಿದ್ದು ವಾಹನ ಸವಾರರು ಜೀವ ಭಯದಲ್ಲಿ ಚಲಾಯಿಸುತ್ತಾರೆ. ತಗ್ಗು-ದಿನ್ನೆಗಳನ್ನು ತಪ್ಪಿಸಲು ಹೋಗಿ ಸಾರ್ವಜನಿಕರಿಗೆ ವಾಹನವನ್ನು ಹಾಯಿಸಿದ್ದನ್ನು ಪಾದಚಾರಿಗಳು ಉದಾಹರಿಸುತ್ತಾರೆ.

ಎನ್‌ಎಚ್‌ಎಐಗೆ ನಾಲ್ಕು ಪುಟ್ಟಿ ಡಾಂಬರ್ ಹಾಕುವುದಕ್ಕೆ ಆಗುವುದಿಲ್ಲವೇ ?
ನಗರದ ಬಹುತೇಕ ಕಡೆ ಅಲ್ಲಲ್ಲಿ ಡಾಂಬರ್ ರಸ್ತೆ ಮಧ್ಯೆ ಹಂಪ್ಸ್ ಮಾದರಿಯಲ್ಲಿ ನೆಲಹಾಸು ಸಿಮೆಂಟ್ ಬ್ರಿಕ್ಸ್ ಅಳವಡಿಸಲಾಗಿದ್ದು, ಪದೇ ಪದೆ ಈ ಬ್ರಿಕ್ಸ್ಗಳು ಭಾರದ ವಾಹನಗಳು ಚಲಿಸಿ ಬೇಗನೆ ಪುಡಿಪುಡಿಯಾಗುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿವೆ. ಕೆಲವೊಮ್ಮೆ ತಾತ್ಕಾಲಿಕವಾಗಿ ನಾಲ್ಕು ಪುಟ್ಟಿ ಮರಂ ಹಾಕಿ ಇಲಾಖೆಯವರು ಕೈತೊಳೆದುಕೊಳ್ಳುತ್ತಿದ್ದಾರೆ. ಶಾಶ್ವತ ದುರಸ್ತಿಯ ಹಿನ್ನೆಲೆಯಲ್ಲಿ ಸಿಮೆಂಟ್ ಕಂಕರ್ ಇಲ್ಲವೇ ಡಾಂಬರ್ ಹಾಕಲು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದವರಿಗೆ ಆಗುವುದಿಲ್ಲವೇ ? ಅಪಘಾತಗಳನ್ನು ತಡೆಯಲು ಸಂಚಾರಿ ಪೊಲೀಸ್ ಠಾಣೆಯವರು, ಇಲ್ಲವೇ ಪಿಡಬ್ಲುö್ಯಡಿ ಇಲಾಖೆಯವರು ಸಂಬAಧಿಸಿದ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಕನಿಷ್ಠ ಮಾಹಿತಿ ನೀಡಲು ಆಗುವುದಿಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.