ಸ್ಪೆಷಲ್ ನ್ಯೂಸ್: ಬಸವರಾಜ.ಎಚ್
ನಮ್ಮ ಸಿಂಧನೂರು, ಜೂನ್ 13
ತಾಲೂಕಿನ ಆರ್.ಎಚ್.ಕ್ಯಾಂಪ್ 3ರ ಬಸವನಗರ ಪ್ರದೇಶದಲ್ಲಿ ಸಂಜೆಯಾಗುತ್ತಿದ್ದAತೆ ಮದ್ಯವ್ಯಸನಿಗಳು ನಡು ರಸ್ತೆಯಲ್ಲಿಯೇ ಪಾನಗೋಷ್ಠಿ ನಡೆಸಿ, ಅರಚಿ-ಕಿರುಚಾಡುವುದಲ್ಲದೇ ದಾರಿಹೋಕರಿಗೆ ವಿನಾಃಕಾರಣ ತೊಂದರೆ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಈ ದಾರಿಯಲ್ಲಿ ಕರೆದುಕೊಂಡು ಹೋಗಲು ಭಯವಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
“ಆರ್.ಎಚ್.ಕ್ಯಾಂಪ್ 3ರ ಒಳ ರಸ್ತೆ ಮಾರ್ಗವು ಗೋಮರ್ಸಿ, ಉದ್ಬಾಳ, ಬೆಳಗುರ್ಕಿ, ಮಾಡಸಿರವಾರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಂಜೆಯಾಗುತ್ತಿದ್ದAತೆ ಇಲ್ಲಿಗೆ ಬರುವ ಹಲವರು ರಸ್ತೆಯ ಮಧ್ಯೆಯೇ ಕುಡಿದು ರಾತ್ರಿ 11 ಗಂಟೆಯವರೆಗೂ ಗದ್ದಲ ಎಬ್ಬಿಸುತ್ತಾರೆ. ಈ ಪ್ರದೇಶದಲ್ಲಿ ಸುಮಾರು 70ರಿಂದ 80 ಮನೆಗಳಿದ್ದು, 300ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಇಲ್ಲಿನ ನಿವಾಸಿಗಳು ತುರ್ತು ಕೆಲಸ ಹಾಗೂ ಆಸ್ಪತ್ರೆಗೆ ಹೋಗಿ ಬರಲು ಭಯಗೊಳ್ಳುವಂತಾಗಿದೆ” ಎಂದು ಹೆಸರೇಳಲಿಚ್ಚಿಸದ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

“ದಾರಿಯಲ್ಲಿ ಕಿರಿ ಕಿರಿ ಮಾಡುತ್ತಾರೆ”
“ಕೆಲ ದಿನಗಳ ಹಿಂದೆ ರಾತ್ರಿ ತುರ್ತು ನಾವು ಆಸ್ಪತ್ರೆಗೆ ಹೋಗುವ ವೇಳೆ ರಸ್ತೆ ಮಧ್ಯೆ ಕುಡಿಯಲು ಕುಂತಿದ್ದ ಏಳೆಂಟು ಜನರು, ದಾರಿ ಬಿಡಿ ಎಂದು ಹೇಳಿದ್ದಕ್ಕೆ ಕಿರಿಕಿರಿ ಮಾಡಿದ್ದಲ್ಲದೇ, ಜಗಳ ತೆಗೆದು ಧಮಕಿ ಹಾಕಿದರು. ಇದರಿಂದ ತುಂಬಾ ಆತಂಕಿತರಾದ ನಾವು ಪೊಲೀಸರಿಗೆ ಫೋನ್ ಮಾಡುತ್ತೇವೆ ಎಂದು ಹೇಳಿದರೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು” ಎಂದು ಬಸವನಗರದ ನಿವಾಸಿಯೊಬ್ಬರು ಹೇಳುತ್ತಾರೆ.
ಮಧ್ಯರಾತ್ರಿವರೆಗೂ ಪಾನಗೋಷ್ಠಿ
“ಇಲ್ಲಿಗೆ ಅಕ್ಕಪಕ್ಕದ ಕ್ಯಾಂಪಿನವರಲ್ಲದೇ ಸುತ್ತಮುತ್ತಲಿನ ಅಪರಿಚಿತರು ದಿನವೂ ಬಂದು ಸಂಜೆಯಿAದ ಮಧ್ಯರಾತ್ರಿವರೆಗೂ ಮದ್ಯ ಸೇವಿಸುವುದಲ್ಲದೇ ವಿಚಿತ್ರವಾಗಿ ಕೂಗಾಡುವುದು, ಕಿರುಚುವುದು ಮಾಡುತ್ತಾರೆ. ಯಾರಾದರು ಇವರಿಗೆ ಬುದ್ಧಿ ಹೇಳಲು ಹೋದರೆ ಅವರ ಮೇಲೆಯೇ ಹಲ್ಲೆ ಮಾಡಲು ಬರುತ್ತಾರೆ. ಸುತ್ತಮುತ್ತಲು ಹಲವು ಕ್ಯಾಂಪ್ಗಳಲ್ಲಿ ಅನಧಿಕೃತವಾಗಿ ಮದ್ಯಮಾರಾಟ ಮಾಡಲಾಗುತ್ತಿದ್ದು, ಅಲ್ಲಿಂದ ಅಕ್ರಮವಾಗಿ ಮದ್ಯವನ್ನು ಮೋಟರ್ ಸೈಕಲ್ಗಳಲ್ಲಿ ತರುವ ವ್ಯಸನಿಗಳು ನಡು ದಾರಿಯಲ್ಲಿಯೇ ಕುಡಿದು ಕುಪ್ಪಳಿಸುತ್ತಾರೆ. ರಾತ್ರಿಯಾದರೆ ಸಾಕು, ಸಭ್ಯಸ್ಥರು ಹೊರಗೆ ಬರುವಂತಿಲ್ಲ. ಮಹಿಳೆಯರು, ಮಕ್ಕಳು ಇಡೀ ರಾತ್ರಿ ಇವರ ಕಿರಿಕಿರಿಗೆ ಭಯದಿಂದ ಜೀವನ ಮಾಡುವಂತಾಗಿದೆ” ಎಂದು ನಿವಾಸಿಯೊಬ್ಬರು ತಿಳಿಸುತ್ತಾರೆ.
“ಪಂಚಾಯಿತಿ ಸದಸ್ಯರಿಗೆ ಹೇಳಿದ್ರೂ ಉಪಯೋಗವಾಗಿಲ್ಲ”
“ಮದ್ಯವ್ಯಸನಿಗಳ ಕಿರಿ ಕಿರಿ ತಡೆಯುವಂತೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಗಮನಕ್ಕೆ ನಿವಾಸಿಗಳೆಲ್ಲರೂ ಸೇರಿ ತಂದಿದ್ದೇವೆ. ಅವರೂ ಕೂಡ ನನ್ನಿಂದ ಅವರಿಗೆ ಹೇಳಲು ಆಗುವುದಿಲ್ಲ, ನೀವೇ ಪೊಲೀಸರಿಗೆ ಕಂಪ್ಲೇAಟ್ ಕೊಡಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ” ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಜಾಣ ಮೌನ ?
“ಈ ಕ್ಯಾಂಪ್ ಪ್ರದೇಶದಲ್ಲಿ ದಿನವೂ ಅಕ್ರಮ ಚಟುವಟಿಕೆ, ಅಪರಾಧಿ ಕೃತ್ಯಗಳು ನಡೆಯುತ್ತಿದ್ದರೂ ಬೀಟ್ ಪೊಲೀಸರು ಇಲ್ಲಿಗೆ ಭೇಟಿ ಕೊಟ್ಟಿಲ್ಲ. ಕಳೆದ 1 ವರ್ಷಕ್ಕೂ ಹೆಚ್ಚು ದಿನಗಳಿಂದ ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಯವರಿಗೆ ಮೌಖಿಕವಾಗಿ ಹಲವು ಬಾರಿ ಮನವಿ ಮಾಡಿದರೂ ಇಲ್ಲಿಯವರೆಗೂ ಏನೂ ಕ್ರಮ ಕೈಗೊಂಡಿಲ್ಲ. ಏನಾದರೂ ಅವಘಡಗಳು ಆದರೆ ಇಲಾಖೆಯ ನಿರ್ಲಕ್ಷö್ಯವೇ ಕಾರಣ” ಎಂದು ನಿವಾಸಿಗಳು ಆರೋಪಿಸುತ್ತಾರೆ.
