ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 13
ನಗರದ ಸತ್ಯಾ ಗಾರ್ಡನ್ನಲ್ಲಿ ಮೇ 17, 18ರಂದು ಎರಡು ದಿನಗಳ ಕಾಲ ‘ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ, ಅಂದು-ಇಂದು’ ವಿಷಯ ಕುರಿತು ರಾಜ್ಯಮಟ್ಟದ ಸಾಹಿತ್ಯ ಮೇಳ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಆದಿತ್ಯ ಶಿಕ್ಷಣ ಸಂಸ್ಥೆಯ ಶ್ರೀ ಆದಿತ್ಯ ಪದವಿ ಪೂರ್ವ ಮತ್ತು ಪದವಿ ವಿದ್ಯಾಲಯದಲ್ಲಿ ಪ್ರಚಾರ ಕೈಗೊಂಡು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರಿಗೆ ಆಹ್ವಾನ ಪತ್ರಿಕೆ ನೀಡಿ ಮೇಳಕ್ಕೆ ಆಹ್ವಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ರೆಡ್ಡಿ, ಪ್ರಾಚಾರ್ಯರಾದ ಜಡಿಸ್ವಾಮಿ ಗುಡದೂರು, ತಾಯಪ್ಪ ತಿಡಿಗೋಳ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಯವರು ಇದ್ದರು.
