ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಮೇ 14
ಇದೇ ಮೇ 17, 18ರಂದು ಎರಡು ದಿನ ನಗರದ ಸತ್ಯಾ ಗಾರ್ಡನ್‌ನಲ್ಲಿ ‘ಅಸಮಾನ ಭಾರತ, ಸಮಾನತೆಗಾಗಿ ಸಂಘರ್ಷ, ಅಂದು-ಇಂದು’ ಘೋಷವಾಕ್ಯದಡಿ ರಾಜ್ಯಮಟ್ಟದ ಸಾಹಿತ್ಯ ಮೇಳ ಆಯೋಜಿಸಲಾಗಿದ್ದು, ಇದರ ಪ್ರಯುಕ್ತ ಬುಧವಾರ ಅನಿಕೇತನ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳನ್ನು ಮೇಳಕ್ಕೆ ಆಹ್ವಾನಿಸಲಾಯಿತು. ಮೇಳದ ಆಶಯದ ಕುರಿತು ಉಪನ್ಯಾಸಕರು ಹಾಗೂ ಮೇಳದ ಸಂಚಾಲಕರಾದ ಶಂಕರ ವಾಲಿಕಾರ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ತಿಮ್ಮಣ್ಣ ರಾಮತ್ನಾಳ, ರಮೇಶ ಹಲಗಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಯವರು ಇದ್ದರು.
